ಸ್ಯಾಂಡಲ್‌ವುಡ್‌ನಲ್ಲೀಗ ಹೊಸಬರದ್ದೇ ಅಬ್ಬರ. ಮಾಸ್ ಹೀರೋಗಳ ಸಿನೆಮಾಗಳು ಅಷ್ಟೇನೂ ಸಕ್ಸಸ್ ಕಾಣ್ತಿಲ್ಲ. ಪ್ರಯೋಗಾತ್ಮಕ ಚಿತ್ರಗಳನ್ನೇ ಪ್ರೇಕ್ಷಕರು ಇಷ್ಟಪಡ್ತಿದ್ದಾರೆ. ಹೊಸತನದ ಜೊತೆಗೆ ಚಿತ್ರದ ಕಥೆ ಮಾತ್ರ ಯಶಸ್ಸು ತಂದುಕೊಡಬಲ್ಲದು ಅನ್ನೋದನ್ನು ಅನೇಕ ಸಿನೆಮಾಗಳು ಸಾಬೀತುಪಡಿಸಿವೆ.
ಇದೇ ಪ್ರಯತ್ನಕ್ಕೆ ಕೈಹಾಕಿದೆ ʼಜೂಲಿಯೆಟ್ 2ʼ ಚಿತ್ರತಂಡ. ಹೆಸರು ಸೂಚಿಸುವಂತೆ ಇದೇನು ಲವ್ ಕಹಾನಿಯಲ್ಲ, ಮಹಿಳಾ ಪ್ರಧಾನ ಚಿತ್ರ. ನಟಿ ಬೃಂದಾ ಆಚಾರ್ಯ, ʼಜೂಲಿಯೆಟ್ 2ʼ ಚಿತ್ರದ ನಾಯಕಿ. ವಿರಾಟ್ ಬಿ ಗೌಡ ನಿರ್ದೇಶನದಲ್ಲಿ ಫೆಬ್ರವರಿ 24 ರಂದು ತೆರೆಗೆ ಅಪ್ಪಳಿಸಲು ಜೂಲಿಯೆಟ್ 2 ಸಜ್ಜಾಗಿದೆ.
ಚಿತ್ರದ ಕಥಾಹಂದರ ಕೂಡ ಸಾಕಷ್ಟು ವಿಶೇಷವಾಗಿದೆ. ಇದೊಂಥರಾ ಸಸ್ಪೆನ್ಸ್ ಥ್ರಿಲ್ಲರ್. ಚಿತ್ರದ ನಾಯಕಿ ಬಾಕ್ಸಿಂಗ್ ಪಟು. ತನಗಾದ ಅನ್ಯಾಯಕ್ಕೆ ಜೂಲಿಯೆಟ್ ಯಾವ ರೀತಿ ಸೇಡು ತೀರಿಸಿಕೊಳ್ತಾಳೆ ಅನ್ನೋದೇ ಸಿನೆಮಾದಲ್ಲಿರೋ ಬಿಗ್ ಸಸ್ಪೆನ್ಸ್. ಸಾಕಷ್ಟು ಕ್ರೈಂ ಹಾಗೂ ಆಕ್ಷನ್ ಸೀನ್‌ಗಳು ಚಿತ್ರದಲ್ಲಿವೆ.
ಈಗಾಗ್ಲೇ ಸಿನೆಮಾದ ಟ್ರೈಲರ್ ರಿಲೀಸ್ ಆಗಿದ್ದು, ಪ್ರೇಕ್ಷಕರನ್ನು ಸೆಳೆಯುತ್ತಿದೆ. ಸುಮಾರು 2 ಮಿಲಿಯನ್ ವೀಕ್ಷಣೆಗಳನ್ನು ಟೀಸರ್ ಗಿಟ್ಟಿಸಿಕೊಂಡಿದೆ. ಕ್ರೈಂ ಹಾಗೂ ಸಸ್ಪೆನ್ಸ್ ಸಿನೆಮಾ ಇಷ್ಟಪಡುವವರಿಗೆ ʼಜೂಲಿಯೆಟ್ 2ʼ ಹೇಳಿ ಮಾಡಿಸಿದಂತಿದೆ.
ಲಿಖಿತ್ ಆರ್ ಕೋಟ್ಯಾನ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ‘ಜೂಲಿಯೆಟ್ 2’ ಚಿತ್ರಕ್ಕೆ ಸಚಿನ್ ಬಸ್ರೂರ್ ಹಿನ್ನೆಲೆ ಸಂಗೀತವಿದೆ. ಕಾಡು ಮೇಡಲ್ಲೆಲ್ಲ ಸಿನೆಮಾದ ಶೂಟಿಂಗ್ ನಡೆದಿದ್ದು, ಪ್ರೇಕ್ಷಕರ ಪ್ರತಿಕ್ರಿಯೆ ಬಗ್ಗೆ ಚಿತ್ರತಂಡ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದೆ. ಜೂಲಿಯೆಟ್‌ಗೆ ಪ್ರೇಕ್ಷಕರು ಯಾವ ರೀತಿ ವೆಲ್ಕಮ್ ಮಾಡ್ತಾರೆ ಅನ್ನೋದು ಫೆಬ್ರವರಿ 24ಕ್ಕೆ ಬಹಿರಂಗವಾಗಲಿದೆ.