ಕಿಡ್ನಿಯು ವೈಫಲ್ಯಗೊಂಡರೆ ಸಂಪೂರ್ಣ ದೇಹದ ಕಾರ್ಯಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಕಿಡ್ನಿಯನ್ನು ಆರೋಗ್ಯವಾಗಿಡಲು ಕಿಡ್ನಿಗೆ ಯಾವುದೇ ರೀತಿಯ ಸೋಂಕು ತಗುಲದಂತೆ ನೋಡಿಕೊಳ್ಳಬೇಕು. ಕಿಡ್ನಿ ಸೋಂಕನ್ನು ತಡೆಯುವಂತಹ ಕೆಲ ಮನೆಮದ್ದುಗಳ ಬಗ್ಗೆ ತಿಳಿಯಿರಿ.
ನೀರು
ಕಿಡ್ನಿಯಲ್ಲಿ ಸೋಂಕನ್ನು ಉಂಟುಮಾಡುವಂತಹ ಬ್ಯಾಕ್ಟೀರಿಯಾಗಳನ್ನು ಹೊರಗೆ ಹಾಕಬೇಕೆಂದರೆ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು.
ಹಣ್ಣಿನ ಜ್ಯೂಸ್
ಕಿತ್ತಳೆ, ನಿಂಬೆ ಹಾಗೂ ದ್ರಾಕ್ಷಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ. ಮತ್ತು ಕಿಡ್ನಿಯನ್ನು ಸ್ವಚ್ಛವಾಗಿಟ್ಟುಕೊಂಡು ಯಾವುದೇ ಸೋಂಕು ಬರದಂತೆ ಕಾಪಾಡುತ್ತದೆ.
ಅಡುಗೆ ಸೋಡಾ
ಒಂದು ಚಮಚ ಅಡುಗೆ ಸೋಡಾವನ್ನು ಒಂದು ಲೋಟ ನೀರಿಗೆ ಹಾಕಿಕೊಳ್ಳಿ. ಇದನ್ನು ಸರಿಯಾಗಿ ಕಲಸಿ ಮತ್ತು ಕುಡಿಯಿರಿ. ಇದನ್ನು ದಿನಾಲೂ ಮಾಡುವುದರಿಂದ ಕಿಡ್ನಿ ಸೋಂಕನ್ನು ತಡೆಯಬಹುದು.
ಬೆಳ್ಳುಳ್ಳಿ
ಮೂತ್ರದ ಮೂಲಕ ಉಪ್ಪು ಹಾಗೂ ಇತರ ಕಲ್ಮಶವನ್ನು ಹೊರಹಾಕುವಲ್ಲಿ ಬೆಳ್ಳುಳ್ಳಿಯು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ದೈನಂದಿನ ಆಹಾರದಲ್ಲಿ ಬೆಳ್ಳುಳ್ಳಿಯನ್ನು ಸೇರಿಸಿಕೊಳ್ಳಿ ಅಥವಾ ಪ್ರತಿ ದಿನ 2-3 ಬೆಳ್ಳುಳ್ಳಿಯನ್ನು ಸೇವನೆ ಮಾಡಿ.
ಆಲಿವ್ ಆಯಿಲ್
ಒಂದು ಚಮಚ ಆಲಿವ್ ತೈಲ ಮತ್ತು ಕೆಲವು ಹನಿ ನಿಂಬೆ ರಸವನ್ನು ಒಂದು ಲೋಟ ನೀರಿಗೆ ಹಾಕಿಕೊಳ್ಳಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ದಿನದಲ್ಲಿ ಎರಡು ಸಲ ಇದನ್ನು ಕುಡಿಯಿರಿ. ಇದು ಕಿಡ್ನಿಯಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಿ ಕಿಡ್ನಿಗೆ ಯಾವುದೇ ರೀತಿಯ ಸೋಂಕು ಬರದಂತೆ ತಡೆಯುತ್ತದೆ.
ಅಲೋವೆರಾ ಜ್ಯೂಸ್
ದಿನದಲ್ಲಿ ಎರಡು ಸಲ ಅಲೋವೆರಾ ಜ್ಯೂಸ್ ಅನ್ನು ಕುಡಿಯುವುದರಿಂದ ದೇಹದಲ್ಲಿನ ವಿಷಕಾರಿ ಅಂಶವು ಹೊರಹೋಗುತ್ತದೆ ಮತ್ತು ಕಿಡ್ನಿಯು ಸ್ವಚ್ಛವಾಗುತ್ತದೆ. ಇದರಿಂದ ಕಿಡ್ನಿಯ ಸೋಂಕನ್ನು ಪರಿಣಾಮಕಾರಿಯಾಗಿ ತಡೆಯಬಹುದು.