ʼಎಟಿಎಂʼ ಕಾರ್ಡ್‌ ಮೇಲೆ 16 ಅಂಕಿಗಳೇಕೆ ಇರುತ್ತವೆ ? ಇಲ್ಲಿದೆ ಮಹತ್ವದ ಮಾಹಿತಿ

ಎಟಿಎಂ ಕಾರ್ಡ್ ಜನರ ಜೀವನವನ್ನು ಹೆಚ್ಚು ಸುಲಭಗೊಳಿಸಿದೆ. ಕಾರ್ಡ್‌ನಿಂದಾಗಿ ಹಣಕಾಸು ವಹಿವಾಟು ಬಹಳ ಈಸಿ. ಈಗ ಡಿಜಿಟಲ್ ವಹಿವಾಟಿಗೂ ಇದು ಬಳಕೆಯಾಗುತ್ತಿದೆ. ಡಿಜಿಟಲ್ ಪಾವತಿ ಮತ್ತು ಎಟಿಎಂ ಕಾರ್ಡ್‌ಗಳಿಂದಾಗಿ ನಗದು ಜಂಜಾಟಕ್ಕೆ ಬ್ರೇಕ್‌ ಬಿದ್ದಂತಾಗಿದೆ. ಎಟಿಎಂ ಕಾರ್ಡ್‌ ಮೇಲೆ 16 ಅಂಕಿಗಳ ಸಂಖ್ಯೆಯೊಂದಿರುತ್ತದೆ. ಆ ಸಂಖ್ಯೆಗಳ ಅರ್ಥವೇನು ಎಂಬುದನ್ನು ನೀವು ಎಂದಾದರೂ ಗಮನಿಸಿದ್ದೀರಾ?

ವಾಸ್ತವವಾಗಿ, ಎಟಿಎಂನಲ್ಲಿರುವ 16 ಸಂಖ್ಯೆಗಳು ಬಹಳ ಮುಖ್ಯ. ಅವು ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ನೇರ ಸಂಪರ್ಕವನ್ನು ಹೊಂದಿರುತ್ತವೆ. ಎಟಿಎಂ ಕಾರ್ಡ್‌ ಮೇಲೆ ಬರೆಯಲಾದ ಮೊದಲ ಅಂಕಿಯ ಸಂಪರ್ಕವು ಅದನ್ನು ನೀಡುವ ಉದ್ಯಮದೊಂದಿಗೆ ಇರುತ್ತದೆ. ಇದನ್ನು ಮೇಜರ್ ಇಂಡಸ್ಟ್ರಿ ಐಡೆಂಟಿಫೈಯರ್ ಎಂದೂ ಕರೆಯುತ್ತಾರೆ. ಪ್ರತಿಯೊಂದು ಉದ್ಯಮಕ್ಕೂ ಈ ಸಂಖ್ಯೆಗಳು ವಿಭಿನ್ನವಾಗಿವೆ. ಮುಂದಿನ 5 ಸಂಖ್ಯೆಗಳನ್ನು ವಿತರಕರ ಗುರುತಿನ ಸಂಖ್ಯೆ ಎಂದು ಕರೆಯಲಾಗುತ್ತದೆ.

ಯಾವ ಕಂಪನಿ ಕಾರ್ಡ್ ನೀಡಿದೆ ಎಂದು ಅದು ಹೇಳುತ್ತದೆ. ಇದರ ನಂತರ 7 ನೇ ಸಂಖ್ಯೆಯಿಂದ 15 ನೇ ಸಂಖ್ಯೆಗೆ ಬರೆದ ಅಂಕಿಗಳು ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಸಂಪರ್ಕ ಹೊಂದಿವೆ. ಆದಾಗ್ಯೂ, ಇವು ನಿಮ್ಮ ಖಾತೆ ಸಂಖ್ಯೆಗಳಲ್ಲ. ಆದರೆ ಖಂಡಿತವಾಗಿಯೂ ಖಾತೆ ಸಂಖ್ಯೆಗೆ ಲಿಂಕ್ ಆಗಿರುತ್ತವೆ. ಕಾರ್ಡ್‌ನಲ್ಲಿ ನಮೂದಿಸಲಾದ 16ನೇ ಸಂಖ್ಯೆ ಎಟಿಎಂ ಕಾರ್ಡ್‌ನ ಸಿಂಧುತ್ವವನ್ನು ಹೇಳುತ್ತದೆ. ಈ ಸಂಖ್ಯೆಯನ್ನು ಚೆಕ್ಸಮ್ ಅಂಕಿ ಎಂದೂ ಕರೆಯುತ್ತಾರೆ. ಎಟಿಎಂ ಕಾರ್ಡ್‌ ಮೇಲೆ ಮುದ್ರಿಸಲಾದ ಹದಿನಾರೂ  ಸಂಖ್ಯೆಗಳಿಗೆ ವಿಶೇಷ ಮಹತ್ವವಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read