ʼಇದು ಭಾರತವಲ್ಲ, ಪಂಜಾಬ್ʼ; ಮುಖದ ಮೇಲೆ ತ್ರಿವರ್ಣ ಧ್ವಜದ ಬಣ್ಣ ಹಾಕಿಕೊಂಡಿದ್ದ ಮಹಿಳೆಗೆ ಗೋಲ್ಡನ್ ಟೆಂಪಲ್ ಪ್ರವೇಶ ನಿರಾಕರಣೆ

ಮುಖದ ಮೇಲೆ ತ್ರಿವರ್ಣ ಧ್ವಜದ ಬಣ್ಣವನ್ನು ಹಾಕಿಕೊಂಡಿದ್ದ ಮಹಿಳೆಗೆ ಪಂಜಾಬ್‌ನ ಅಮೃತಸರದಲ್ಲಿರುವ ಗೋಲ್ಡನ್ ಟೆಂಪಲ್‌ಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಆರೋಪಿಸಲಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವಾರ ಆಕ್ರೋಶಕ್ಕೆ ಗುರಿಯಾಗಿದೆ.

ಅಂತರ್ಜಾಲದಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿರುವ ಕ್ಲಿಪ್‌ನಲ್ಲಿ, ಪ್ರಸಿದ್ಧ ಸಿಖ್ ದೇಗುಲಕ್ಕೆ ಪ್ರವೇಶಿಸಲು ಅವಕಾಶ ನೀಡದ ವ್ಯಕ್ತಿಯನ್ನು ಮಹಿಳೆ ಮತ್ತು ಪುರುಷ ಪ್ರಶ್ನಿಸುತ್ತಿರುವುದನ್ನ ಕಾಣಬಹುದು.

ಮಹಿಳೆಯನ್ನು ಗುರುದ್ವಾರಕ್ಕೆ ಏಕೆ ಪ್ರವೇಶಿಸಲು ಅನುಮತಿಸಲಿಲ್ಲ ಎಂದು ಕೇಳಿದಾಗ, ಅವಳ ಮುಖದ ಮೇಲೆ ಧ್ವಜವಿದೆ ಎಂದು ವ್ಯಕ್ತಿ ಉತ್ತರಿಸಿದ್ದಾರೆ. ಇದು ಭಾರತದ ಧ್ವಜ ಎಂದು ಮಹಿಳೆ ಹೇಳಿದಾಗ, “ಇದು ಪಂಜಾಬ್, ಭಾರತವಲ್ಲ” ಎಂದು ವ್ಯಕ್ತಿ ಉತ್ತರಿಸಿದ್ದಾರೆ.

ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ತೀಕ್ಷ್ಣವಾದ ಪ್ರತಿಕ್ರಿಯೆಗಳನ್ನು ಹುಟ್ಟುಹಾಕುತ್ತಿದ್ದಂತೆ, ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿಯ (SGPC) ಪ್ರಧಾನ ಕಾರ್ಯದರ್ಶಿ ಸ್ಪಷ್ಟೀಕರಣವನ್ನು ನೀಡಿದ್ದಾರೆ.‌

ಇದು ಸಿಖ್ ದೇಗುಲ. ಪ್ರತಿಯೊಂದು ಧಾರ್ಮಿಕ ಸ್ಥಳಕ್ಕೂ ಅದರದ್ದೇ ಆದ ವಿಶೇಷತೆಯಿದೆ. ಎಲ್ಲರಿಗೂ ಸ್ವಾಗತವಿದೆ. ಅಧಿಕಾರಿಯೊಬ್ಬರು ಅನುಚಿತವಾಗಿ ವರ್ತಿಸಿದರೆ ಕ್ಷಮೆಯಾಚಿಸುತ್ತೇವೆ. ಮಹಿಳೆಯ ಮುಖದಲ್ಲಿರುವ ಧ್ವಜ ನಮ್ಮ ರಾಷ್ಟ್ರಧ್ವಜವಾಗಿರಲಿಲ್ಲ. ಅದರಲ್ಲಿ ಅಶೋಕ ಚಕ್ರ ಇರಲಿಲ್ಲ. ಇದು ರಾಜಕೀಯ ಧ್ವಜವಾಗಿರಬಹುದು ಎಂದು ಎಸ್‌ಜಿಪಿಸಿ ಪ್ರಧಾನ ಕಾರ್ಯದರ್ಶಿ ಗುರುಚರಣ್ ಸಿಂಗ್ ಗ್ರೆವಾಲ್ ಅವರು ವೈರಲ್ ವೀಡಿಯೊ ಕುರಿತು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read