BREAKING: ಉದ್ಯಮಿಗೆ ವಂಚನೆ ಪ್ರಕರಣ: ಆರೋಪಿಗಳ ಪರ ಸಚಿವ ಜಮೀರ್ ಅಹ್ಮದ್ ಸಾಥ್; PSIಗೆ ಕರೆ ಮಾಡಿರುವ ಆಡಿಯೋ ವೈರಲ್

ಚಿಕ್ಕಬಳ್ಳಾಪುರ: ಜೋಳ ಖರೀದಿಸಿದ್ದ ಉದ್ಯಮಿಗೆ 89 ಲಕ್ಷ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪರ ಸಚಿವ ಜಮೀರ್ ಅಹ್ಮದ್ ಸಾಥ್ ನೀಡಿದ್ದು, ಪಿಎಸ್ ಐ ಗೆ ಕರೆ ಮಾಡಿ ಆರೋಪಿಗಳನ್ನು ಬಿಟ್ಟುಬಿಡುವಂತೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ.

ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ರಾಮಕೃಷ್ಣ, ನಾಸೀರ್, ಅಬ್ದುಲ್ ರಜಾಕ್ ಹಾಗೂ ಅಕ್ಬರ್ ಪಾಷಾ ವಿರುದ್ಧ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೇರಸಂದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಚಿಕ್ಕಬಳ್ಳಾಪುರದ ಪೇರಸಂದ್ರ ಠಾಣೆ ಪಿಎಸ್ ಐ ಜಗದೀಶ್ ಎಂಬುವವರಿಗೆ ಕರೆ ಮಾಡಿರುವ ಸಚಿವ ಜಮೀರ್ ಅಹ್ಮದ್, ಆರೋಪಿಗಳ ಪರ ಮಾತನಾಡಿದ್ದಾರೆ. ಅವರು ನನಗೆ ತುಂಬಾ ಬೇಕಾದವರು. ಹಾಗಾಗಿ ಈ ಪ್ರಕರಣದಲ್ಲಿ ಸ್ವಲ್ಪ ಸಹಾಯ ಮಾಡಿ ಆರೋಪಿಗಳನ್ನು ಬಿಟ್ಟು ಬಿಡುವಂತೆ ಹೇಳಿದ್ದಾರೆ. ಅದಕ್ಕೆ ಪಿಎಸ್ ಜಗದೀಶ್, ಎರಡೂ ಕಡೆಯವರನ್ನು ಠಾಣೆಗೆ ಕರೆಸಿ ಕೇಸ್ ಇತ್ಯರ್ಥ ಮಾಡಿಸುವುದಾಗಿ ತಿಳಿಸಿದ್ದಾರೆ. ಸಚಿವರು ಹಾಗೂ ಪಿಎಸ್ ಐ ನಡುವಿನ ಸಂಭಾಷೆಯ ಆಡೀಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read