ಹಾವೇರಿ: ಜನವರಿಯಲ್ಲಿ ನಟ ದರ್ಶನ್ ಗೆ ಜಾಮೀನು ಸಿಗುವ ನಿರೀಕ್ಷೆಯಿದೆ ಎಂದು ಸಚಿವ ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ ತಿಳಿಸಿದ್ದಾರೆ.
ಹಾವೇರಿಯಲ್ಲಿ ಕಲ್ಟ್ ಸಿನಿಮಾ ಪ್ರಚಾರದ ವೇಳೆ ಮಾತನಾಡಿದ ನಟ ಝೈದ್ ಖಾನ್, ಜನವರಿಯಲ್ಲಿ ದರ್ಶನ್ ಅಣ್ಣಂಗೆ ಬೇಲ್ ಸಿಗುವ ಸಾಧ್ಯತೆ ಇದೆ. ಒಂದು ವೇಳೆ ಸಿಗದಿದ್ದರೆ ನಾನೇ ಜೈಲಿಗೆ ಹೋಗಿ ಅವರ ಆಶಿರ್ವಾದ ಪಡೆದು ಬರುತ್ತೇನೆ ಎಂದಿದ್ದಾರೆ.
ನೋವಿನಲ್ಲಿಯೂ ದರ್ಶನ್ ಅವರು ಅಭಿಮಾನಿಗಳಿಗೆ ಸಕ್ಸಸ್ ಸಿನಿಮಾ ಕೊಟ್ಟಿದ್ದಾರೆ. ದರ್ಶನ್ ಎಂಬ ಹೆಸರಿನಿಂದಲೇ ಸಿನಿಮಾ ಸಕ್ಸಸ್ ಆಗುತ್ತೆ. ಇದನ್ನು ನಾನು ಡೆವಿಲ್ ನೋಡಿ ಕಲಿತೆ ಎಂದರು.
ಸಚಿವ ಜಮೀರ್ ಅವರ ರಾಜಕೀಯ ಕಾಂಟ್ರವರ್ಸಿ ನನ್ನ ಸಿನಿಮಾಗಳ ಮೇಲೂ ಪರಿಣಾಮ ಬೀರುತ್ತದೆ. ನನ್ನ ಹಿಂದಿನ ಸಿನಿಮಾವನ್ನು ಅದೇ ಕಾರಣಕ್ಕೆ ಬಾಯ್ಕಾಟ್ ಮಾಡಲಾಯಿತು. ಮನಸ್ಸಿನಲ್ಲಿ ಕೆಲ ಮಾತುಗಳು ಇವೆ. ಅವುಗಳನ್ನು ಈಗ ನಾನು ಹೇಳಲು ಆಗುವುದಿಲ್ಲ. ಸಿನಿಮಾ ಗೆದ್ದ ಬಳಿಕ ಹೇಳಿದರೆ ಅದಕ್ಕೆ ತೂಕ ಬರುತ್ತದೆ ಎಂದರು.
