ಇದೇ ಮೊದಲ ಬಾರಿಗೆ ‘ಯುವ ದಸರಾ’ಕ್ಕೆ ಪ್ರವೇಶ ದರ ನಿಗದಿ: ಟಿಕೆಟ್ ದರ 8 ಸಾವಿರ, 5 ಸಾವಿರ ರೂ.

ಮೈಸೂರು: ಯುವ ದಸರಾ ವೀಕ್ಷಣೆಗೆ ಟಿಕೆಟ್ ಪಡೆದುಕೊಳ್ಳಬೇಕಿದೆ. ಇದೇ ಮೊದಲ ಬಾರಿಗೆ ಯುವ ದಸರಾಕ್ಕೆ ಪ್ರವೇಶ ದರ ನಿಗದಿಪಡಿಸಲಾಗಿದ್ದು, 8 ಸಾವಿರ ರೂ., 5 ಸಾವಿರ ರೂ. ಟಿಕೆಟ್ ದರ ನಿಗದಿಪಡಿಸಲಾಗಿದೆ.

ಮೈಸೂರು ಹೊರವಲಯದ ಉತ್ತನಹಳ್ಳಿ ಸಮೀಪ ಆಯೋಜಿಸಿರುವ ಯುವ ದಸರಾ ಕಾರ್ಯಕ್ರಮ ವೀಕ್ಷಣೆಗೆ ಇದೇ ಮೊದಲ ಬಾರಿಗೆ ಟಿಕೆಟ್ ಗಳ ಮಾರಾಟಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಸೆ. 27ರಿಂದ ಆನ್ಲೈನ್ ನಲ್ಲಿ ದಸರಾ ಅಧಿಕೃತ ಜಾಲತಾಣವಾದ https://www.mysoredasara.gov.in/ ಅಥವಾ ಬುಕ್ ಮೈ ಶೋ ಮೂಲಕ ಟಿಕೆಟ್ ಖರೀದಿಸಬಹುದಾಗಿದೆ.

ವೇದಿಕೆ ಸಮೀಪದ ವೀಕ್ಷಕರ ಗ್ಯಾಲಿ -1 ಟಿಕೆಟ್ ದರ 8 ಸಾವಿರ ರೂ. ನಿಗದಿಪಡಿಸಲಾಗಿದೆ. ವೀಕ್ಷಕರ ಗ್ಯಾಲರಿ -2 ಟಿಕೆಟ್ ಗಳಿಗೆ 5000 ರೂ. ದರ ನಿಗದಿಪಡಿಸಲಾಗಿದೆ. ಒಂದು ಟಿಕೆಟ್ ನಲ್ಲಿ ಒಬ್ಬರಿಗೆ ಒಂದು ಕಾರ್ಯಕ್ರಮಕ್ಕೆ ಮಾತ್ರ ನಿಗದಿತ ಗ್ಯಾಲರಿಯಲ್ಲಿ ಪ್ರವೇಶ ಅವಕಾಶ ಇರುತ್ತದೆ.

ಅ. 6 ರಿಂದ 10ರವರೆಗೆ ಪ್ರತಿದಿನ ಸಂಜೆ 6ರಿಂದ 10 ಗಂಟೆವರೆಗೆ ಯುವ ದಸರಾ ಕಾರ್ಯಕ್ರಮ ನಡೆಯಲಿದೆ. ಅ. 6ರಂದು ಚಲನಚಿತ್ರ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ ಯುವ ದಸರಾ ಉದ್ಘಾಟಿಸಲಿದ್ದಾರೆ.

ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ. ಒಂದು ಲಕ್ಷ ಜನ ವೀಕ್ಷಿಸಲು ವ್ಯವಸ್ಥೆ ಮಾಡಿದ್ದು, ಟಿಕೆಟ್ ಆಧರಿಸಿ ಕುರ್ಚಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಕಾಯ್ದಿರಿಸಲು ಆನ್ ಲೈನ್ ಮೂಲಕ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ.

ಅ. 6ರಂದು ಬಾಲಿವುಡ್ ಗಾಯಕಿ ಶ್ರೇಯಾ ಘೋಷಾಲ್, ಅ. 7 ರಂದು ಸಂಗೀತ ನಿರ್ದೇಶಕ ರವಿ ಬಸ್ರೂರು, ಅ. 8ರಂದು ರ್ಯಾಪರ್ ಬಾದ್ ಷಾ, ಅ.9ರಂದು ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್, ಅ.10 ರಂದು ಸಂಗೀತ ನಿರ್ದೇಶಕ ಇಳಯರಾಜ ತಂಡದವರು ರಸ ಸಂಜೆ ಕಾರ್ಯಕ್ರಮ ನೀಡಲಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read