ರಾಜ್ಯದ ವಿವಿಧೆಡೆ ಯುಗಾದಿ ಸಂಭ್ರಮ ಹೆಚ್ಚಿಸಿದ ಮಳೆ

ಬೆಂಗಳೂರು: ಯುಗಾದಿ ದಿನ ರಾಜ್ಯದ ವಿವಿಧೆಡೆ ಮಳೆಯಾಗಿದೆ. ಭಾರಿ ಬಿಸಿಲಿನಿಂದ ತತ್ತರಿಸಿದ್ದ ಜನರಿಗೆ ತಂಪಿನ ಅನುಭವವಾಗಿದೆ. ಕೊಪ್ಪಳ, ವಿಜಯನಗರ, ಹಾವೇರಿ, ಬಾಗಲಕೋಟೆ ಜಿಲ್ಲೆಯ ಹಲವೆಡೆ ಮಂಗಳವಾರ ಮಳೆಯಾಗಿದೆ.

ಬಿಸಿಲಿನ ತಾಪದಿಂದ ತತ್ತರಿಸಿದ್ದ ಜನ ಮಳೆಯಾಗುತ್ತಿದ್ದ ಕುಣಿದು ಕುಪ್ಪಳಿಸಿದ್ದಾರೆ. ಕೊಪ್ಪಳ ತಾಲೂಕಿನ ಕೆಲವು ಗ್ರಾಮಗಳಲ್ಲಿ ಮಳೆಯಾಗಿದ್ದು, ವರ್ಷದ ಮೊದಲ ಮಳೆ ಸಮೃದ್ಧಿ ತರುವ ಸೂಚನೆ ಸಿಕ್ಕಿದೆ, ಕೊಪ್ಪಳ ತಾಲೂಕಿನ ಹಲಗೇರಿ ಗ್ರಾಮದಲ್ಲಿ ಭಾರಿ ಗಾಳಿ ಮಳೆಯಿಂದ ಮನೆಯ ತಗಡಿನ ಛಾವಣಿ ಹಾರಿಹೋಗಿದೆ. ದೇವಪ್ಪ ಎಂಬುವರಿಗೆ ಸೇರಿದ ಮನೆ ಮೇಲೆ ಹಾಕಲಾಗಿದ್ದ ಛಾವಣಿ ಹಾರಿಹೋಗಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.

ಬಾಗಲಕೋಟೆಯ ವಾಂಬೆ ಕಾಲೋನಿಯಲ್ಲಿ ಮಳೆಯಾಗಿದೆ. 15 ನಿಮಿಷಕ್ಕೂ ಅಧಿಕ ಕಾಲ ಜಟಿಜಿಟಿ ಮಳೆಯಾಗಿದ್ದು ತಂಪಿನ ಅನುಭವವಾಗಿದೆ.

ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣ ಸೇರಿದಂತೆ ಹಲವು ಕಡೆ ಮಳೆಯಾಗಿದೆ. ಬನಹಟ್ಟಿ ಬಿಸಿಲಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಳೆಯಾಗಿದೆ.

ವಿಜಯನಗರ ಜಿಲ್ಲೆ ಹರಪನಹಳ್ಳಿಯ ಉಚ್ಚಂಗಿದುರ್ಗದಲ್ಲಿ ಮಳೆಯಾಗಿದೆ. ಜಾತ್ರೆಯ ಹೊತ್ತಲ್ಲಿ ಮಳೆಯಾಗಿರುವುದು ಜನರಿಗೆ ಖುಷಿಯಾಗಿದೆ. ಮಳೆಯಲ್ಲಿಗೆ ಕೆಲವರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read