ವೈ ಎಸ್ ವಿ ದತ್ತಾ ಘರ್ ವಾಪಸಿ; ಏ.18 ರಂದು ಕಡೂರು ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ

ತೆನೆ ಇಳಿಸಿ ಕಾಂಗ್ರೆಸ್ ಪಕ್ಷ ಸೇರಿದ್ದ ವೈ ಎಸ್ ವಿ ದತ್ತಾ ಘರ್ ವಾಪಸಿ ಆಗಿದ್ದಾರೆ. ಕಡೂರಿನಿಂದ ಕಾಂಗ್ರೆಸ್ ಟಿಕೆಟ್ ಸಿಗದ ಹಿನ್ನೆಲೆ ವೈ ಎಸ್ ವಿ ದತ್ತಾ ಮತ್ತೆ ಜೆಡಿಎಸ್ ಗೆ ಮರಳಿದ್ದಾರೆ. ಚಿಕ್ಕಮಗಳೂರಿನ ಯಗಟಿಯಲ್ಲಿರುವ ವೈ ಎಸ್ ವಿ ದತ್ತಾ ಮನೆಗೆ ಪ್ರಜ್ವಲ್ ರೇವಣ್ಣ , ಮತ್ತು ಹೆಚ್. ಡಿ. ರೇವಣ್ಣ ಭೇಟಿ ನೀಡಿ ಜೆಡಿಎಸ್ ನಿಂದ ಟಿಕೆಟ್ ನೀಡೋದಾಗಿ ಘೋಷಿಸಿ, ಇಂದಿನಿಂದಲೇ ಪ್ರಚಾರ ಮಾಡಿ ಎಂದು ಹೇಳಿದರು.

ಇದರ ಬೆನ್ನಲ್ಲೇ ವೈ ಎಸ್ ವಿ ದತ್ತಾ ಏಪ್ರಿಲ್ 18 ರಂದು ಜೆಡಿಎಸ್ ನಿಂದ ಕಡೂರು ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸೋದಾಗಿ ಸ್ಪಷ್ಟನೆ ನೀಡಿದರು. ಕಡೂರು ತಾಲೂಕಿನ ಯಗಟಿ ನಿವಾಸದಲ್ಲಿ ವೈ ಎಸ್ ವಿ ದತ್ತಾ ಕಾರ್ಯಕರ್ತರೊಂದಿಗೆ ಸಭೆ ನಡೆಸ್ತಿದ್ರು. ಈ ವೇಳೆ ಭೇಟಿ ನೀಡಿದ ಪ್ರಜ್ವಲ್ ರೇವಣ್ಣ ಮತ್ತು ಹೆಚ್. ಡಿ. ರೇವಣ್ಣ , ವೈ ಎಸ್ ವಿ ದತ್ತಾರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಂಡು ಕಡೂರಿನಿಂದ ಟಿಕೆಟ್ ನೀಡೋದಾಗಿ ಹೇಳಿದರು.

ನಾನು ಕಾರ್ಯಕರ್ತರ ಅಭಿಪ್ರಾಯ ಪಡೆದು ಈ ತೀರ್ಮಾನ ಮಾಡಿದ್ದೇನೆಂದ ವೈ ಎಸ್ ವಿ ದತ್ತಾ, ಹೆಚ್.ಡಿ. ದೇವೇಗೌಡರ ಮಾತಿಗೆ ನಾನು ಬೆಲೆ ಕೊಟ್ಟಿದ್ದೇನೆ. ದೇವೇಗೌಡರು ಪಕ್ಷೇತರರಾಗಿ ಸ್ಪರ್ಧಿಸುವುದು ಬೇಡ ಎಂದಿದ್ದಾರೆ. ಹಾಗಾಗಿ ಅವರ ಮಾತಿಗೆ ಬೆಲೆ ಕೊಡುತ್ತೇನೆ ಎಂದರು.

ದತ್ತಾಗೆ ಕಾಂಗ್ರೆಸ್ ಟಿಕೆಟ್ ನೀಡುವುದಿಲ್ಲ ಎಂದು ಗೊತ್ತಿತ್ತು. ಯಾವಾಗಲೂ ನಾನು ದತ್ತಾರ ಜೊತೆ ಇರುತ್ತೇನೆ ಎಂದು ಇದೇ ವೇಳೆ ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read