ಹಾಸನ: ಧರ್ಮಸ್ಥಳದ ಪ್ರಕರಣದಲ್ಲಿ ಯೂಟ್ಯೂಬರ್ ಗಳ ನಡುವೆ ಕದನ ಆರಂಭವಾಗಿದೆ. ಯೂಟ್ಯೂಬರ್ ಸುಮಂತ್ ವಿರುದ್ಧ ಯೂಟ್ಯೂಬರ್ ಅಭಿಷೇಕ್ ದೂರು ದಾಖಲಿಸಿದ್ದಾರೆ.
ಕೆಲ ದಿನಗಳ ಹಿಂದೆ ಯೂಟ್ಯೂಬರ್ ಸುಮಂತ್, ಅಭಿಷೇಕ್ ಧರ್ಮಸ್ಥಳ ವಿಡಿಯೋ ಮಾಡುವಂತೆ ನನಗೂ ಹೇಳಿದ್ದ, ಹಣ ಕೊಡುವುದಾಗಿಯೂ ಹೇಳಿದ್ದ. ಆತ ಹಣ ಪಡೆದು ಧರ್ಮಸ್ಥಳ ವಿಡಿಯೋ ಮಾಡುತ್ತಿದ್ದ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದ. ಈ ಹಿನ್ನೆಲೆಯಲ್ಲಿ ಯೂಟ್ಯೂಬರ್ ಅಭಿಷೇಕ್ ಸುಮಂತ್ ವಿರುದ್ಧ ಸಿಡಿದೆದ್ದಿದ್ದು, ದೂರು ದಾಖಲಿಸಿದ್ದಾರೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಠಾಣೆಯಲ್ಲಿ ಅಭಿಷೇಕ್ ದೂರು ದಾಖಲಿಸಿದ್ದಾರೆ. ಸುಮಂತ್ ವಿರುದ್ಧ ಅಭಿಷೇಕ್ ನಾಲ್ಕು ಆರೋಪಗಳನ್ನು ಮಾಡಿದ್ದಾರೆ. ಹಣ ಪಡೆದು ಧರ್ಮಸ್ಥಳದ ವಿರುದ್ಧ ವಿಡಿಯೋ ಆರೋಪ, ಸುಮಂತ್ ಗೂ ವಿಡಿಯೋ ಮಾಡುವಂತೆ ಒತ್ತಾಯ, ಚಂದನ್ ಮೂಲಕ ವಿಡಿಯೋ ಮಾಡಿಸಲು ಯತ್ನ ಎಂದು ಆರೋಪಿಸಿದ್ದು, ಸುಮಂತ್ ಮಾಡಿರುವ ಎಲ್ಲಾ ಆರೋಪಗಳು ಸುಳ್ಳು. ಸುಮಂತ್ ಆರೋಪದಿಂದಾಗಿ ನನ್ನ ಗೌರವಕ್ಕೆ ಧಕ್ಕೆಯಾಗಿದೆ ಎಂದು ದೂರು ಸಲ್ಲಿಸಿದ್ದಾರೆ.
ಯೂಟ್ಯೂಬರ್ ಅಭಿಷೇಕ್ ಈ ಹಿಂದೆ ಧರ್ಮಸ್ಥಳ ವಿರುದ್ಧ ಅಪಪ್ರಚಾರ ಕೇಸ್ ನಲ್ಲಿ ಎಸ್ ಐಟಿ ತನಿಖೆ ಎದುರಿಸಿದ್ದರು.