ವ್ಹೀಲಿಂಗ್ ಮಾಡಬೇಡ ಎಂದಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಚಾಕು ಇರಿತ

ಶಿವಮೊಗ್ಗ: ಬೈಕ್ ನಲ್ಲಿ ವ್ಹೀಲಿಂಗ್ ಮಾಡಬೇಡ ಎಂದು ಬುದ್ಧಿವಾದ ಹೇಳಿದ ಹಿಂದೂ ಯುವಕನಿಗೆ ಅನ್ಯ ಕೋಮಿನ ಯುವಕರ ಗುಂಪು ಚಾಕುವಿನಿಂದ ಇರಿದ ಘಟನೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಕುಮದ್ವತಿ ಕಾಲೇಜಿನಲ್ಲಿ ಕಂಪ್ಯೂಟರ್ ಆಪರೇಟರ್ ಆಗಿರುವ ಸುಶೀಲ್(23) ಚಾಕು ಇರಿತಕ್ಕೆ ಒಳಗಾದ ಯುವಕ. ಶಿಕಾರಿಪುರದ ದೊಡ್ಡಪೇಟೆ ಮುಖ್ಯರಸ್ತೆಯ ವಿಠ್ಠಲ ದೇವಸ್ಥಾನದ ಸಮೀಪ ಘಟನೆ ನಡೆದಿದೆ. ಕೆಲವು ತಿಂಗಳಿನಿಂದ ನಿರಂತರವಾಗಿ ಬೈಕ್ ನಲ್ಲಿ ವ್ಹೀಲಿಂಗ್ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಅನ್ಯಕೋಮಿನ ಯುವಕನಿಗೆ ಸುಶೀಲ್ ಬುದ್ಧಿವಾದ ಹೇಳಿದ್ದಾರೆ. ಅವರಿಗೆ ಧಮಕಿ ಹಾಕಿ ಹೋದ ಅನ್ಯಕೋಮಿನ ಯುವಕ ನಂತ ಸ್ನೇಹಿತರೊಂದಿಗೆ ಬಂದು ಚಾಕುವಿನಿಂದ ಇರಿದಿದ್ದಾನೆ.

ಗಾಯಗೊಂಡ ಸುಶೀಲ್ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆರೋಪಿಗಳ ಪತ್ತೆಗೆ ಮೂರು ತಂಡ ರಚಿಸಲಾಗಿದೆ ಎಂದು ಎಸ್.ಪಿ. ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read