ಮಂಗಳೂರು: ಕ್ಷುಲ್ಲಕ ಕಾರಣಕ್ಕೆ ಇಬ್ಬರು ಯುವಕರಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
ಸುರತ್ಕಲ್ ನ ಕಟ್ಲ ನಿವಾಸಿಗಳಾದ ಸುಶಾಂತ್ ಯಾನೆ ಕಡಮೆ(29), ಕೆ.ವಿ. ಅಲೆಕ್ಸ್(27), ಇಂದಿರಾಕಟ್ಟೆ ನಿವಾಸಿ ನಿತಿನ್(26) ಮತ್ತು ಆರೋಪಿಗಳಿಗೆ ಆಶ್ರಯ ನೀಡಿದ್ದ ಕುಳಾಯಿ ಹೊನ್ನಕಟ್ಟೆಯ ಅರುಣ್ ಶೆಟ್ಟಿ(56) ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಮುಖ ಆರೋಪಿ ರೌಡಿಶೀಟರ್ ಗುರುರಾಜ್ ಮತ್ತು ಆರೋಪಿಗಳಿಗೆ ಆಶ್ರಯ ನೀಡಿದ್ದ ಅಶೋಕ್ ತಲೆಮರೆಸಿಕೊಂಡಿದ್ದು ಅವರ ಬಂಧನಕ್ಕೆ ಬಲೆ ಬೀಸಲಾಗಿದೆ. ಗುರುವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಸುರತ್ಕಲ್ ಬಳಿಯ ದೀಪಕ್ ಬಾರ್ ಬಳಿ ಹಸನ್ ಮುಕ್ಷಿತ್ ಮತ್ತು ನಿಜಾಮ್ ಎಂಬುವರಿಗೆ ಆರೋಪಿಗಳು ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದರು. ಸುರತ್ಕಲ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು.
