ನಿಮ್ಮ ಹೆಬ್ಬೆರಳು ತಿಳಿಸುತ್ತೆ ನಿಮ್ಮ ಸ್ವಭಾವ

ಜಾತಕ, ಹಸ್ತರೇಖೆ, ದೇಹದ ಅಂಗಾಂಗ, ಮಚ್ಚೆ ಹೀಗೆ ಅನೇಕ ವಿಧಗಳಿಂದ ವ್ಯಕ್ತಿಯ ಭವಿಷ್ಯ ಹಾಗೂ ಆತನ ಸ್ವಭಾವವನ್ನು ಹೇಳಬಹುದು. ಅಂಗೈನಲ್ಲಿ ನಮ್ಮ ಭವಿಷ್ಯವಿದೆ ಎನ್ನಲಾಗುತ್ತದೆ. ಹಾಗೆ ನಮ್ಮ ಕೈಬೆರಳುಗಳು ನಮ್ಮ ಭವಿಷ್ಯ ಮತ್ತು ಸ್ವಭಾವವನ್ನು ಹೇಳುತ್ತವೆ.

ಸಣ್ಣ ಹೆಬ್ಬೆರಳುಗಳನ್ನು ಹೊಂದಿರುವ ವ್ಯಕ್ತಿಗಳು ಸಾಹಿತ್ಯದಲ್ಲಿ ಆಸಕ್ತಿ ಹೊಂದಿರುತ್ತಾರೆ. ಕವನ ರಚನೆ, ಬರವಣಿಗೆ, ಸಂಗೀತ ಸೇರಿದಂತೆ ಸೃಜನಶೀಲ ಕೆಲಸದಲ್ಲಿ ಆಸಕ್ತಿ ಹೊಂದಿರುತ್ತಾರೆ. ಇವರಿಗೆ ಪ್ರೀತಿಯ ಕೊರತೆ ಕಾಡುವುದಿಲ್ಲ. ಬುದ್ದಿಗಿಂತ ಮನಸ್ಸನ್ನು ಹೆಚ್ಚು ಕೇಳುತ್ತಾರೆ. ಇತರರಿಗೆ ಸಲಹೆ ನೀಡುವ ಇವರು ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ವಿಫಲರಾಗುತ್ತಾರೆ.

ಉದ್ದನೆ ಹೆಬ್ಬೆರಳು ವ್ಯಕ್ತಿಗಳು ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ತೀಕ್ಷ್ಣಬುದ್ದಿ ಜೊತೆ ನಾಯಕತ್ವದ ಗುಣವಿರುತ್ತದೆ. ಯಾವುದೇ ಪರಿಸ್ಥಿತಿಯನ್ನು ಸುಲಭವಾಗಿ ನಿಭಾಯಿಸಬಲ್ಲರು. ಎಂದಿಗೂ ಹಣದ ಕೊರತೆ ಎದುರಿಸುವುದಿಲ್ಲ.

ಗಟ್ಟಿಯಾದ ಹೆಬ್ಬೆರಳು ಹೊಂದಿರುವ ವ್ಯಕ್ತಿಗಳು ಕೋಪಿಷ್ಠರಾಗಿರುತ್ತಾರೆ. ಕೋಪದಿಂದ ಅವರ ಕೆಲಸ ಹಾಳಾಗುತ್ತದೆ. ಹೃದಯವಂತರಾಗಿರುವ ಇವರು ರಾಜಕೀಯದಲ್ಲಿ ಯಶಸ್ಸು ಸಾಧಿಸುತ್ತಾರೆ.

ಮೃದು ಹೆಬ್ಬೆರಳು ಹೊಂದಿರುವ ಜನರು ಸಕಾರಾತ್ಮಕ ಸ್ವಭಾವ ಹೊಂದಿರುತ್ತಾರೆ. ಸದಾ ಸಾಧಿಸುವ ಹಂಬಲ ಹೊಂದಿರುತ್ತಾರೆ. ಕಲಿಕೆಯನ್ನು ಇಷ್ಟಪಡುತ್ತಾರೆ.

ಯಾರ ಹೆಬ್ಬೆರಳು ಸುಲಭವಾಗಿ ಹಿಂದಕ್ಕೆ ಬಾಗುತ್ತದೆಯೋ ಅವರು ಮೊಂಡು ಸ್ವಭಾವದವರಲ್ಲ. ಎಲ್ಲರ ಜೊತೆ ಸುಲಭವಾಗಿ ಹೊಂದಿಕೊಳ್ಳುತ್ತಾರೆ. ಬೇಗ ಬೇರೆಯವರ ಮಾತು ನಂಬುವುದ್ರಿಂದ ಕೆಲವೊಮ್ಮೆ ನಷ್ಟ ಅನುಭವಿಸುತ್ತಾರೆ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿದ್ದರೂ ಖರ್ಚು ಹೆಚ್ಚಿರುವ ಕಾರಣ ಹಣ ಉಳಿಸಲು ಸಾಧ್ಯವಾಗುವುದಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read