ನಿನ್ನ ಹೆಸರೂ ಲಿಸ್ಟ್ ನಲ್ಲಿದೆ: ಹಿಂದೂ ಸಂಘಟನೆ ಮುಖಂಡನಿಗೆ ಜೀವ ಬೆದರಿಕೆ

ಮಂಗಳೂರು: ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆ ಹೆಸರಲ್ಲಿ ಹಿಂದೂ ಜಾಗರಣ ವೇದಿಕೆ ಮುಖಂಡನಿಗೆ ಜೀವ ಬೆದರಿಕೆ ಹಾಕಲಾಗಿದೆ.

ಉರ್ದು ಭಾಷೆಯಲ್ಲಿ ವಾಟ್ಸಾಪ್ ಮೂಲಕ ಆಡಿಯೋ ಮೆಸೇಜ್ ಕಳುಹಿಸಲಾಗಿದೆ. ಹಿಂದೂ ಜಾಗರಣ ವೇದಿಕೆ ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕ ನರಸಿಂಹ ಮಾಣಿ ಅವರಿಗೆ ಬೆದರಿಕೆ ಹಾಕಲಾಗಿದೆ. ಹಿಂದೂ ಮುಖಂಡರ ಲಿಸ್ಟ್ ರೆಡಿ ಮಾಡಿದ್ದೇವೆ. ನಿನ್ನ ಹೆಸರು ಕೂಡ ಲಿಸ್ಟ್ ನಲ್ಲಿ ಇದೆ. ಚಲನವಲನ ಗಮನಿಸುತ್ತಿದ್ದೇವೆ. ಕೊಲೆಯಾದ ಸುಹಾಸ್ ಶೆಟ್ಟಿ ಕೂಡ ನಮ್ಮ ಲಿಸ್ಟ್ ನಲ್ಲಿದ್ದ. ಆದರೆ, ಯಾರೋ ಒಳ್ಳೆಯ ಜನ ಅವನನ್ನು ಕೊಂದು ಹಾಕಿದ್ದಾರೆ ಎಂದು ಹೇಳಲಾಗಿದೆ.

ನಿನ್ನ ಸ್ನೇಹಿತ ರಂಜಿತ್ ಎಂಬುವನನ್ನು ಕ್ರೂರವಾಗಿ ಕೊಲ್ಲುತ್ತೇವೆ. ರಂಜಿತ್ ತಲೆ ಕಡಿದು ದೆಹಲಿಯ ಮೈನ್ ಗೇಟ್ ನಲ್ಲಿ ನೇತಾಡಿಸುತ್ತೇವೆ. ನಾವು ದೆಹಲಿಗೆ ಬಂದಿದ್ದೇವೆ. ನಿಮ್ಮ ಉಲ್ಟಾ ಲೆಕ್ಕಾಚಾರ ಸ್ಟಾರ್ಟ್ ಆಗಿದೆ. ನಿಮ್ಮನ್ನು ಹೇಗೆ ಕೊಲ್ಲುತ್ತೇವೆ ಎಂದು ಅಲ್ಲಾಗೆ ಗೊತ್ತಿಲ್ಲ. ನಿನ್ನ ಕೊಂದ ರೀತಿ ನೋಡಿ ಜನ ಕೊಲ್ಲುವ ವಿಧಾನವನ್ನೇ ಮರೆಯಲಿದ್ದಾರೆ. ಮುಸ್ಲಿಮರಿಗೆ ತೊಂದರೆ ಕೊಡುವುದನ್ನು ಬಿಟ್ಟು ನಿನ್ನ ಬಗ್ಗೆ ಯೋಚಿಸು. ನಿಮ್ಮ ಪಾರ್ಟಿ, ಯಾವುದೇ ಮುಖಂಡರು ನಿಮ್ಮನ್ನು ರಕ್ಷಿಸಲು ಸಾಧ್ಯವಿಲ್ಲ. ನಿಮ್ಮ ಜೊತೆಗೆ ನಿಮ್ಮ ಮುಖಂಡರನ್ನು ಮುಗಿಸಲಾಗುವುದು. ಇದು ಮುಜಾಹಿದ್ದಿನ್ ಸಂದೇಶ ಎಂದು ನರಸಿಂಹ ಮಾಣಿಗೆ ಬೆದರಿಕೆ ಹಾಕಲಾಗಿದೆ. ಪಾಕಿಸ್ತಾನ, ಅಫ್ಘಾನಿಸ್ತಾನ, ಸೌದಿ ಅರೇಬಿಯಾ ಮೊಬೈಲ್ ಸಂಖ್ಯೆಯಿಂದ ಮೆಸೇಜ್ ಕಳುಹಿಸಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read