SHOCKING : ರೂಂಮೇಟ್ ಉಂಗುರ ಕದ್ದ ಯುವತಿ : ಸಹಾಯ ಮಾಡುವ ನೆಪದಲ್ಲಿ ಅತ್ಯಾಚಾರ ಎಸಗಿದ ಬೆಂಗಳೂರಿನ ಪಿಜಿ ಮಾಲೀಕ ಅರೆಸ್ಟ್.!

ಬೆಂಗಳೂರು : 21 ವರ್ಷದ ನರ್ಸಿಂಗ್ ಪದವೀಧರೆಯೊಬ್ಬರ ಮೇಲೆ ಪಿಜಿ ಮಾಲೀಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಜೂನ್ 21 ರಂದು ದಕ್ಷಿಣ ಬೆಂಗಳೂರಿನ ಮೈಕೋ ಲೇಔಟ್ನಲ್ಲಿ ಈ ಘಟನೆ ನಡೆದಿತ್ತು. ಮಹಿಳೆ ದೂರು ನೀಡಿದ ನಂತರ ಪೊಲೀಸರು 35 ವರ್ಷದ ರವಿತೇಜ ರೆಡ್ಡಿ ಎಂದು ಗುರುತಿಸಲಾದ ಶಂಕಿತನನ್ನು ಬಂಧಿಸಿದರು. ಪೊಲೀಸ್ ತನಿಖೆಯಲ್ಲಿ ರೆಡ್ಡಿ ಪಿಜಿ ನಡೆಸುತ್ತಿದ್ದಾನೆ ಎಂದು ತಿಳಿದುಬಂದಿದೆ.

ಸಂತ್ರಸ್ತ ಯುವತಿ ವಾಸಿಸುತ್ತಿದ್ದ ಪಿಜಿಯಲ್ಲಿ ಉಂಗುರವೊಂದು ಕಳ್ಳತನವಾಗಿತ್ತು. ಪಿಜಿಯಲ್ಲಿರುವ ಎಲ್ಲಾ ಮಹಿಳೆಯರನ್ನು ಕರೆಸಿದ ರೆಡ್ಡಿ ಉಂಗುರಗಳನ್ನು ಹಿಂತಿರುಗಿಸದಿದ್ದರೆ ಪೊಲೀಸರನ್ನು ಸಂಪರ್ಕಿಸುವುದಾಗಿ ಎಚ್ಚರಿಸಿದನು. ಆ ಉಂಗುರವನ್ನು ಸಂತ್ರಸ್ತ ಯುವತಿ ಕದ್ದಿರುವ ಆರೋಪವಿತ್ತು. ಯುವತಿ ಪಿಜಿ ಮಾಲೀಕನ ಕಾಲಿಗೆ ಬಿದ್ದು ಯಾರಿಗೂ ವಿಚಾರ ಹೇಳಬೇಡಿ ಎಂದು ಬೇಡಿಕೊಂಡಾಗ ಆಕೆಯ ಲಾಭ ಪಡೆದುಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಯುವತಿ ತನ್ನ ಸಹ ನಿವಾಸಿಯ 3 ಉಂಗುರಗಳನ್ನು ಕದ್ದಿದ್ದಳು. ಕಳ್ಳತನದ ವಿಷಯ ಮುಚ್ಚಿ ಹಾಕಲು ರೆಡ್ಡಿ ಸಹಾಯ ಕೇಳಿದ್ದಳು. ಉಂಗುರದ ಬಗ್ಗೆ ವಿಚಾರಿಸುವ ನೆಪದಲ್ಲಿ ರೆಡ್ಡಿ ಆಕೆಯ ಖಾಸಗಿ ಭಾಗ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ್ದಕ್ಕೆ ಆತ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ನಂತರ ಆಕೆಯನ್ನು ಜಯನಗರದ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಆಸ್ಪತ್ರೆಯು ಮೆಡಿಕೋ-ಲೀಗಲ್ ಕೇಸ್ (MLC) ದಾಖಲಿಸಿತು, ಅದರ ಆಧಾರದ ಮೇಲೆ ಪೊಲೀಸರು ಅತ್ಯಾಚಾರದ FIR ದಾಖಲಿಸಿದರು.

TAGGED:
Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read