ಚಿಕ್ಕಬಳ್ಳಾಪುರ: ಪ್ರೀತಿಸಿ ಮದುವೆಯಾದರೂ ಕುಟುಂಬದವರು ಪತಿ-ಪತ್ನಿಯನ್ನು ದೂರ ಮಾಡಿದ ಆರೋಪದಲ್ಲಿ ಯುವಕನೊಬ್ಬ ಪತ್ನಿ ಮನೆ ಮುಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಕೌರವನಹಳ್ಳಿ ಶೇಖರ್ ಆತ್ಮಹತ್ಯೆಗೆ ಯತ್ನಿಸಿರುವ ಯುವಕ. ತಾನು ಮದುವೆಯಾದ ಹುಡುಗಿಯನ್ನು ಆಕೆಯ ಕುಟುಂಬದವರು ತನ್ನೊಂದಿಗೆ ಕಳುಹಿಸಿಕೊಡುತ್ತಿಲ್ಲ. ಹಲವು ಬಾರಿ ಯುವತಿ ಕುಟುಂಬದವರಿಗೆ ಕೇಳಿಕೊಂಡರೂ ಬಿಟ್ಟಿಲ್ಲ. ಇದರಿಂದ ಮನನೊಂದ ಶೇಖರ್, ಯುವತಿ ಮನೆಯ ಮುಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಅಸ್ವಸ್ಥನಾಗಿದ್ದ ಶೇಖರ್ ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಶೇಖರ್ ಚಿಕ್ಕಬಳ್ಲಪೌರ ಬಿಜಿಎಸ್ ಕಾಲೇಜು ಬಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಅದೇ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ವಿಜಯಪುರ ಮೂಲದ ಯುವತಿಯನ್ನು ಪ್ರೀತಿಸಿದ್ದನಂತೆ. ಇಬ್ಬರೂ ಒಂದೇ ಸಮುದಾಯದವರಾಗಿದ್ದಾರೂ ಇಬ್ಬರ ಮನೆಯಲ್ಲಿ ಮದುವೆಗೆ ಒಪ್ಪಿಲ್ಲ. ಕುಟುಂಬಗಳ ವಿರೋಧದ ನಡುವೆಯೂ ಇಬ್ಬರೀ ದೇವ್ಬಸ್ಥಾನದಲ್ಲಿ ಮದುವೆಯಾಗಿ ಬಂದಿದ್ದಾರೆ. ವಿಷಯ ತಿಳಿದ ಯುವತಿ ಕುಟುಂಬಸ್ಥರು ಆಕೆಯನ್ನು ಮನೆಗೆ ಕರೆದೊಯ್ದಿದ್ದಾರೆ. ಇದರಿಂದ ಮನನೊಂದು ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ.