ಸಾಮಾನ್ಯವಾಗಿ ಜನರು ದೂರದಿಂದ ಸಿಂಹವನ್ನು ನೋಡಲು ಹೆದರುತ್ತಾರೆ.. ಸಿಂಹಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿ ಜನರು ಪ್ರಾಣ ಕಳೆದುಕೊಂಡಿರುವ ಅನೇಕ ಘಟನೆಗಳಿವೆ. ಆದರೆ ಮೃಗಾಲಯದಲ್ಲಿ ಯುವಕನೋರ್ವ ಹುಚ್ಚಾಟ ಮೆರೆದು ತನ್ನ ಪ್ರಾಣ ಕಳೆದುಕೊಂಡಿದ್ದಾನೆ. ಅಂತಹ ಒಂದು ವೀಡಿಯೊ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಬ್ರೆಜಿಲ್ನಲ್ಲಿ ನಡೆದ ಹೃದಯವಿದ್ರಾವಕ ಘಟನೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಸಿಂಹವನ್ನು ಹತ್ತಿರದಿಂದ ನೋಡುವ ಬಯಕೆ ಯುವಕನೊಬ್ಬನ ಪ್ರಾಣವನ್ನೇ ಬಲಿ ತೆಗೆದುಕೊಂಡಿದೆ. ಸ್ಥಳೀಯರನ್ನು ಆಘಾತಕ್ಕೀಡು ಮಾಡಿರುವ ಈ ಘಟನೆಯ ವಿಡಿಯೋ ಪ್ರಸ್ತುತ ವೈರಲ್ ಆಗುತ್ತಿದೆ. ಬ್ರೆಜಿಲ್ನ ಅರುಡಾ ಕ್ಯಾಮರಾ ಮೃಗಾಲಯದಲ್ಲಿ ಈ ಘಟನೆ ನಡೆದಿರುವಂತೆ ತೋರುತ್ತದೆ.
ವಿಡಿಯೋದಲ್ಲಿ, ಯುವಕನೊಬ್ಬ ಸಿಂಹವನ್ನು ಹತ್ತಿರದಿಂದ ನೋಡಲು ಪ್ರಯತ್ನಿಸಿದನು. ಹುಚ್ಚಾಟ ಮೆರೆದು ಯುವಕ ಮರ ಹತ್ತಿ ಸೀದಾ ಸಿಂಹ ಇರುವ ಬ್ಯಾರಕ್ ಗೆ ಇಳಿದನು. ಇದನ್ನು ನೋಡಿದ ಕೂಡಲೇ ಸಿಂಹ ಓಡಿ ಹೋಗಿ ಆತನನ್ನ ಎಳೆದುಕೊಂಡು ಪೊದೆಯ ಬಳಿ ಹೋಗಿ ತಿಂದು ಬಿಸಾಡಿತು.. ಪ್ರವಾಸಿಗರನ್ನು ತಮ್ಮ ಮೊಬೈಲ್ ನಲ್ಲಿ ವೀಡಿಯೋ ಸೆರೆಹಿಡಿದಿದ್ದಾರೆ. “ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವುದು ಮಾರಕ ಪರಿಣಾಮಗಳಿಗೆ ಕಾರಣವಾಗಬಹುದು. ಕಾಡು ಪ್ರಾಣಿಗಳ ಹತ್ತಿರ ಹೋಗಲು ಪ್ರಯತ್ನಿಸಬಾರದು” ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಕೂಡ ಈ ಘಟನೆಗೆ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.
NEW: Brazilian teen killed after climbing into lion enclosure at zoo
— Insider Paper (@TheInsiderPaper) December 1, 2025
READ: https://t.co/BZ4EjLtV5R pic.twitter.com/W5jUnQvW9i
