BREAKING NEWS: ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದ ಯುವಕ: ಇಂಜಕ್ಷನ್ ಪಡೆದ ಕೆಲವೇ ನಿಮಿಷಗಳಲ್ಲಿ ಸಾವು

ಕೋಲಾರ: ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಅನಾರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಸಾಮಾನ್ಯ ಜ್ವರ-ನೆಗಡಿ-ಕೆಮ್ಮಿನಂತಹ ಸಮಸ್ಯೆಗಳು ಸ್ವಲ್ಪ ಕಡಿಮೆಯಾಗುತ್ತಿದೆ ಎಂದು ನಿಟ್ಟುಸಿರುಬಿಡುವಷ್ಟರಲ್ಲಿ ಮತ್ತೆ ಶುವಾಗಿ ಜನರನ್ನು ಹೈರಾಣಾಗಿಸುತ್ತಿದೆ. ಇಲ್ಲೋರ್ವ ಯುವಕ ಜ್ವರ ಎಂದು ಆಸ್ಪತ್ರೆಗೆ ದಾಖಲಾಗಿದ್ದವನು ಇಂಜಕ್ಷನ್ ಮಡಿದ ಬಳಿಕ ಸಾವನ್ನಪ್ಪಿರುವ ಘಟನೆ ನಡೆದಿದೆ.

ಕೋಲಾರ ತಾಲೂಕಿನ ವಕ್ಕಲಗೇರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. 23 ವರ್ಷದ ಯುವಕ ವಿನೋದ್ ಮೃತ ದುರ್ದೈವಿ. ಜ್ವರದಿಂದ ಬಳಲುತ್ತಿದ್ದ ಯುವಕ ಸನ್ ರೈಸ್ ಕ್ಲಿನಿಕ್ ಗೆ ಹೋಗಿದ್ದ. ಕ್ಲಿನಿಕ್ ನಲ್ಲಿ ವೈದ್ಯರು ಇಂಜಕ್ಷನ್ ನೀಡಿದ್ದರು. ಇಂಜಕ್ಷನ್ ಪಡೆದು ಕೆಲವೇ ನಿಮಿಷಗಳಲ್ಲಿ ಯುವಕ ಸಾವನ್ನಪ್ಪಿದ್ದಾನೆ.

ವೈದ್ಯರ ನಿರ್ಲಕ್ಷದಿಂದಲೇ ಯುವಕ ಸಾವನ್ನಪ್ಪಿದ್ದಾನೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read