ಚಿಕ್ಕಬಳ್ಳಾಪುರ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ತಳಿರು-ತೋರಣ ಕಟ್ಟಲು ಹೋಗಿದ್ದ ಯುವಕನೊಬ್ಬ ಕರೆಂಟ್ ಶಾಕ್ ಹೊಡೆದು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನದೆದಿದೆ.
ಚಿಕ್ಕಬಳ್ಳಾಪುರದ ಹೊನ್ನೇನಹಳ್ಳಿ ಡಿ.ಕೆ.ಫ್ಯಾಮಿಲಿ ರೆಸ್ಟೋರೆಂಟ್ ಬಳಿ ಈ ಘಟನೆ ನಡೆದಿದೆ. ರೆಸ್ಟೋರೆಂಟ್ ಮುಂಭಾಗ ತೋರಣ ಕಟ್ಟಲೆಂದು ತೆರಳಿದ್ದ ವೇಳೆ ಯುವಕನಿಗೆ ವಿದ್ಯುತ್ ಶಾಕ್ ಹೊಡೆದಿದ್ದು, ಸ್ಥಳದಲ್ಲೇ ಯುವಕ ಸಾವನ್ನಪ್ಪಿದ್ದಾನೆ.
ನೇಪಾಳ ಮೂಲದ ಪದಮ್ ಮೃತ ಯುವಕ. ಡಿ.ಕೆ.ರೆಸ್ಟೋರೆಂಟ್ ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ. ರೆಸ್ಟೋರೆಂಟ್ ಮುಂಭಾಗ ತೋರಣ ಕಟ್ಟಲು ಪದಮ್ ಅಲ್ಲಿಯೇ ಇದ್ದ ಪಾನ್ ಶಾಪ್ ಮೇಲೆ ಹಾದುಹೋಗಿದ್ದ 11 ಕೆ.ವಿ ವಿದ್ಯುತ್ ಲೈನ್ ಪದಮ್ ತಲೆಗೆ ತಗುಲಿದೆ. ಕರೆಂಟ್ ಶಾಕ್ ಹೊಡೆದು ಪದಮ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.