ಬೆಂಗಳೂರು: ಟೀ ಚೆನ್ನಾಗಿಲ್ಲ ಅಂದಿದಕ್ಕೆ ಟೀ ಅಂಗಡಿ ಯುವಕ ಬಿಎಂಟಿಸಿ ಬಸ್ ಚಾಲಕನ ತಲೆ ಬುರುಡೆ ಓಪನ್ ಆಗುವಂತೆ ಹೊಡೆದಿರುವ ಘಟನೆ ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ನಡೆದಿದೆ.
ಬಿಎಂಟಿಸಿ ಬಸ್ ಚಾಲಕರೊಬ್ಬರು ಬಸ್ ನಿಲ್ದಾಣದಲ್ಲಿದ್ದ ಟೀ ಅಂಗಡಿಗೆ ಟೀ ಕುಡಿಯಲೆಂದು ಬಂದಿದ್ದಾರೆ. ಟೀ ಸೇವಿಸಿದ ಬಳಿಕ ಟೀ ಚೆನ್ನಾಗಿಲ್ಲ ಎಂದು ಅಂಗಡಿಯಲ್ಲಿದ್ದ ಯುವಕನಿಗೆ ಹೇಳಿದ್ದಾರೆ. ಈ ವೇಳೆ ಯುವಕ ಹಾಗೂ ಚಾಲಕನ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಈ ವೇಳೆ ಟೀ ಅಂಗಡಿ ಯುವಕ ಚಾಲಕನ ತಲೆ ಮೇಲೆ ಟೀ ಫ್ಲಾಸ್ಕ್ ನಿಂದ ಹೊಡೆದಿದ್ದಾನೆ.
ಯುವಕನ ಏಟಿಗೆ ಚಾಲಕನ ತಲೆ ಬುರುಡೆ ಓಪನ್ ಆಗಿದ್ದು, ರಕ್ತ ಚಿಮ್ಮಿದೆ. ಗಂಭೀರವಾಗಿ ಗಾಯಗೊಂಡಿರುವ ಚಾಲಕ ಆಸ್ಪತ್ರೆಗೆ ದಾಖಲಾಗಿದ್ದಾರೆ.