ಕಲಬುರಗಿ: ಯುವಕನ ಕಿರುಕುಳಕ್ಕೆ ನೊಂದ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಕುರಿಕೋಟಾ ಸೇತುವೆ ಬಳಿ ನಡೆದಿದೆ.
ಕಮಲಾಪುರ ತಾಲೂಕಿನ ಭೂಸಣಗಿ ಗ್ರಾಮದ 21 ವರ್ಷದ ಸಾಕ್ಷಿ ಉಪ್ಪಾರ ಮೃತ ಯುವತಿ. ಅಭಿಷೇಕ್ ಎಂಬ ಯುವಕ, ಯುವತಿ ಸಾಕ್ಷಿಗೆ ಮದುವೆಯಾಗುವಂತೆ ಕುರುಕುಳ ನೀಡುತ್ತಿದ್ದ. ಎರಡು ವರ್ಷಗಳ ಹಿಂದೆ ಕೆಲಸಕ್ಕೆಂದು ದುಬೈಗೆ ಹೋದವನು ಅಲ್ಲಿಂದಲೂ ಕರೆ ಮಾಡಿ ಪದೇ ಪದೇ ಪೀಡಿಸುತ್ತಾ, ಕಿರುಕುಳ ನೀಡುತ್ತಿದ್ದನಂತೆ. ಅಲ್ಲದೇ ಸಾಕ್ಷಿ ಫೋಟೋವನ್ನು ಎಡಿಟ್ ಮಾಡಿ ತನ್ನ ಜೊತೆಗಿದ್ದ ರೀತಿಯಲ್ಲಿ ಬಿಂಬಿಸಿ ಸೋಷಿಯಲ್ ಮೀಡಿಯಾಗಳಲ್ಲಿ ಅಪ್ ಲೋಡ್ ಮಾಡಿದ್ದನಂತೆ.
ಇದರಿಂದ ಮನನೊಂದ ಸಾಕ್ಷಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಬಗ್ಗೆ ಸಾಕ್ಷಿ ತಾಯಿ ನೀಡಿರುವ ದೂರಿನ ಮೇರೆಗೆ ಮಹಗಾಂವ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.