ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯೂಪಿಎಲ್) ಆರಂಭಗೊಂಡ ಬಳಿಕ ದೇಶದಲ್ಲಿ ಹುಡುಗಿರು ಕ್ರಿಕೆಟ್‌ನತ್ತ ಹಿಂದೆಂದೂ ಇರದ ರೀತಿಯಲ್ಲಿ ಆಕರ್ಷಿತರಾಗುತ್ತಿದ್ದಾರೆ.
ಗಲ್ಲಿಗಳಿಂದ ಹಿಡಿದು ಅಕಾಡೆಮಿಗಳ ನೆಟ್ಸ್‌ಗಳವರೆಗೂ ಹುಡುಗಿಯರ ಕ್ರಿಕೆಟ್ ಕಲೆಗಳ ಅನಾವರಣಗೊಳ್ಳುವ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಇದೀಗ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಸಹ ಇಂಥ ಒಂದು ವಿಡಿಯೋವನ್ನು ಶೇರ್ ಮಾಡಿದ್ದಾರೆ. ಪುಟ್ಟ ಹುಡುಗಿಯೊಬ್ಬಳು ಸುಧಾರಿತ ಪಿಚ್ ಮೇಲೆ ಬ್ಯಾಟಿಂಗ್ ಕೌಶಲ್ಯ ತೋರುತ್ತಿರುವ ವಿಡಿಯೋವನ್ನು ಮೆಚ್ಚಿಕೊಂಡಿರುವ ವೈಷ್ಣವ್, “ಇದರಲ್ಲಿ ನನ್ನ ಫೇವರಿಟ್ ’ಹೆಲಿಕಾಪ್ಟರ್ ಶಾಟ್’, ನಿಮ್ಮ ಆಯ್ಕೆ ಯಾವುದು?” ಎಂದು ಕ್ಯಾಪ್ಷನ್ ಕೊಟ್ಟು ವಿಡಿಯೋ ಶೇರ್ ಮಾಡಿದ್ದಾರೆ.
“ಪ್ರತಿಭಾನ್ವಿತ ಎಳೆಯ ಕ್ರಿಕೆಟರ್‌ಗೆ ಶುಭ ಹಾರೈಕೆಗಳು. ಆಕೆಯ ಕನಸುಗಳು ನನಸಾಗಲಿ. ಆಕೆ ಹೇಗೆ ಹೆಲಿಕಾಪ್ಟರ್ ಶಾಟ್‌ಗಳನ್ನು ಬಾರಿಸುತ್ತಿದ್ದಾಳೆ ಎಂಬ ವಿಡಿಯೋ ಶೇರ್ ಮಾಡಿದ್ದಕ್ಕೆ ಧನ್ಯವಾದ, ಸನ್ಮಾನ್ಯ ಕೇಂದ್ರ ಸಂಪುಟ ಸಚಿವರೇ,” ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.
https://twitter.com/AshwiniVaishnaw/status/1638775359918473217?ref_src=twsrc%5Etfw%7Ctwcamp%5Etweetembed%7Ctwterm%5E1638819688137510912%7Ctwgr%5Ec53ad23f868982fd5e0c8873c657827e26447e9f%7Ctwcon%5Es2_&ref_url=https%3A%2F%2Fwww.news18.com%2Fbuzz%2Fyoung-girl-impresses-railway-minister-ashwini-vaishnaw-with-her-helicopter-shot-7375027.html
https://twitter.com/AshwiniVaishnaw/status/1638775359918473217?ref_src=twsrc%5Etfw%7Ctwcamp%5Etweetembed%7Ctwterm%5E1638943103477489664%7Ctwgr%5Ec53ad23f868982fd5e0c8873c657827e26447e9f%7Ctwcon%5Es2_&ref_url=https%3A%2F%2Fwww.news18.com%2Fbuzz%2Fyoung-girl-impresses-railway-minister-ashwini-vaishnaw-with-her-helicopter-shot-7375027.html