ಬೆಂಗಳೂರು : ಕೃಷಿಕರಿಗೆ ಹೆಣ್ಣು ಕೊಡಲು ಹಿಂದೇಟು ಹಾಕುತ್ತಿರುವ ಹಿನ್ನೆಲೆ ‘ಕನ್ಯೆಭಾಗ್ಯ’ ಆರಂಭಿಸುವಂತೆ ಸಿಎಂ ಸಿದ್ದರಾಮಯ್ಯಗೆ ರೈತರು ಮೊರೆಯಿಟ್ಟಿದ್ದಾರೆ.
ಹಾವೇರಿ ಜಿಲ್ಲೆಯ ಯುವಕರು ಸಿಎಂ ಸಿದ್ದರಾಮಯ್ಯನವರ ಮೊರೆ ಹೋಗಿದ್ದು, ಕನ್ಯೆ ಭಾಗ್ಯ ಆರಂಭಿಸುವಂತೆ ಬ್ಯಾಡಗಿ ತಾಲೂಕಿನ ಮದುವೆ ಆಗದ ಯುವ ರೈತರು ಪತ್ರದ ಮೂಲಕ ಮನವಿ ಸಲ್ಲಿಸಿದ್ದಾರೆ.
5 ರಿಂದ 6 ಎಕರೆ ಜಮೀನು ಇದ್ದರೂ ಸಹ ಯಾರೂ ಕೂಡ ಹೆಣ್ಣು ಕೊಡಲು ಬರುತ್ತಿಲ್ಲ, ನಾವು ಕೂಡ ಜಮೀನಿನಲ್ಲಿ ಲಕ್ಷಾಂತರ ರೂ ಆದಾಯ ಗಳಿಸುತ್ತಾರೆ. 5 ಸಾವಿರ ಸಂಬಳ ತೆಗೆದುಕೊಳ್ಳುವವರಿಗೆ ಹುಡುಗಿ ಕೊಡುತ್ತಾರೆ, ಆದರೆ ರೈತರಿಗೆ ಕೊಡಲ್ಲ, ಅದರಲ್ಲೂ ಕೃಷಿಕರೇ ಕೃಷಿಕರ ಮಕ್ಕಳಿಗೆ ಹೆಣ್ಣು ಕೊಡಲ್ಲ. ಆದ್ದರಿಂದ ಯುವ ರೈತರನ್ನು ಮದುವೆಯಾಗುವ ಯುವತಿಯರಿಗೆ ಕನಿಷ್ಟ 2 ಲಕ್ಷ ರೂ ಪ್ರೋತ್ಸಾಹ ಧನ ಘೋಷಿಸಿ ಎಂದು ಮನವಿ ಮಾಡಿದ್ದಾರೆ. ಈ ಹಿನ್ನೆಲೆ ‘ಕನ್ಯೆಭಾಗ್ಯ’ ಆರಂಭಿಸುವಂತೆ ಸಿಎಂ ಸಿದ್ದರಾಮಯ್ಯಗೆ ರೈತರು ಪತ್ರದ ಮೂಲಕ ಮೊರೆಯಿಟ್ಟಿದ್ದಾರೆ.