ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಲೈಕ್ಸ್, ಕಮೆಂಟ್ ಗಿಟ್ಟಿಸಿಕೊಳ್ಳಬೇಕೆಂಬ ಕಾರಣಕ್ಕೆ ಯುವ ಜನತೆ ಅಪಾಯಕಾರಿ ಸಾಹಸಗಳಿಗೆ ಮುಂದಾಗುತ್ತಾರೆ. ಇದರಿಂದ ತಮ್ಮ ಜೀವಕ್ಕೆ ತೊಂದರೆ ಮಾಡಿಕೊಳ್ಳುವುದರ ಜೊತೆಗೆ ಕುಟುಂಬಸ್ಥರ ನೋವಿಗೆ ಕಾರಣರಾಗುತ್ತಾರೆ. ಆದರೆ ಇಲ್ಲೊಬ್ಬ ಹುಡುಗನ ‘ಟ್ಯಾಲೆಂಟ್’ ವಿಡಿಯೋ ನೋಡಿದ್ರೆ ನೀವೂ ಬೆಸ್ಟ್ ಎಂದು ಹೇಳುತ್ತೀರಿ.
ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಕೃಷ್ಣ ಎಂಬವರು ತಮ್ಮ ಅಧಿಕೃತ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಫುಲ್ ವೈರಲ್ ಆಗಿದೆ. ಒಟ್ಟು ಎರಡು ವಿಡಿಯೋಗಳನ್ನು ಕೃಷ್ಣ ಅವರು ಹಂಚಿಕೊಂಡಿದ್ದು, ಒಂದರಲ್ಲಿ ಈ ಹುಡುಗ ತನ್ನ ಹಿಂಬದಿಯ ಗೋಡೆ ಮೇಲೆ ಸಿಲುಕಿಸಿರುವ ಶರ್ಟ್ ಗೆ ನೇರವಾಗಿ ಮೊಬೈಲ್ ಫೋನ್ ಹಾಕುತ್ತಾನೆ. ಇಂಟರೆಸ್ಟಿಂಗ್ ಸಂಗತಿ ಎಂದರೆ ಈತ ಶರ್ಟ್ ನೇರವಾಗಿ ನೋಡದೆ ಹಿಂಬದಿಯಿಂದ ಮೊಬೈಲ್ ಫೋನ್ ಹಾಕಿದ್ದಾನೆ.
ಮತ್ತೊಂದು ವಿಡಿಯೋದಲ್ಲಿ ಮೊಬೈಲ್ ಫೋನನ್ನು ತನ್ನ ಕಾಲಿಗೆ ಸಿಕ್ಕಿಸಿಕೊಂಡು ಅದನ್ನು ಮೇಲೆ ಎಸೆದು ಕತ್ತಿನ ಮೇಲೆ ಹಿಡಿದುಕೊಳ್ಳುತ್ತಾನೆ. ಇದೇ ಹುಡುಗನ ಇತರೆ ಟ್ಯಾಲೆಂಟ್ ವಿಡಿಯೋಗಳು ಸಹ ಇದ್ದು ನೋಡುಗರು ಶಬ್ಬಾಷ್ ಎಂದಿದ್ದಾರೆ. ಈ ಸ್ಟಂಟ್ ಮಾಡುವಾಗ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರ ಕಬಾಲಿ ಚಿತ್ರದ ಡೈಲಾಗ್ ಕೇಳಿ ಬರುತ್ತದೆ. ಈ ವಿಡಿಯೋಗಳನ್ನು ನೀವೂ ನೋಡಿ ಎಂಜಾಯ್ ಮಾಡುವುದರ ಜೊತೆಗೆ ಕಮೆಂಟ್ ಕೂಡ ಹಾಕಿ.
https://www.youtube.com/shorts/lj72gi3dlM8?si=ROrd0wMpBXRCZZEq