ನಿಮಗೆ ಗೊತ್ತಾ ಕಂಪ್ಯೂಟರ್ ಕೀ ಬೋರ್ಡ್ ನಲ್ಲಿ ಅಕ್ಷರಗಳು ಈ ರೀತಿಯಿರುವ ಹಿಂದಿನ ಇಂಟ್ರಸ್ಟಿಂಗ್ ಕಾರಣ

ಕಂಪ್ಯೂಟರ್ ಈಗ ಅತ್ಯಗತ್ಯ ಎನ್ನುವಂತಾಗಿದೆ. ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ಕಡ್ಡಾಯವಾಗಿದೆ. ಕಂಪ್ಯೂಟರ್ ಕಲಿಯುವಾಗ ಟೈಪಿಂಗ್ ಅನೇಕರಿಗೆ ಸಮಸ್ಯೆಯಾಗುತ್ತದೆ. ಕೀಬೋರ್ಡ್‌ನಲ್ಲಿ ಅಕ್ಷರಗಳನ್ನು ಹುಡುಕಲು ಕೆಲವು ಸೆಕೆಂಡು ಬೇಕಾಗುತ್ತದೆ. 10 ಪದ ಬರೆಯಲು, ಅಕ್ಷರ ಹುಡುಕಿ, ಹುಡುಕಿ ಸುಸ್ತಾಗ್ತಾರೆ. ಯಾಕೆ ಕೀಬೋರ್ಡ್ ಅಕ್ಷರಗಳನ್ನು ಸಾಲಾಗಿಟ್ಟಿಲ್ಲ ಎಂದು ಅನೇಕರು ಯೋಚಿಸುತ್ತಾರೆ. ಸಾಲಾಗಿ ಅಕ್ಷರವಿದ್ದರೆ  ಟೈಪಿಂಗ್ ಎಷ್ಟು ಸುಲಭ ಎನ್ನಿಸುತ್ತದೆ. ಆದ್ರೆ ವಾಸ್ತವದಲ್ಲಿ ಈಗಿನ ಕೀಬೋರ್ಡ್ ಅಕ್ಷರ ಸರಿಯಾಗಿದೆ.

ಕೀಬೋರ್ಡ್ ವಿಚಿತ್ರ ಇತಿಹಾಸವನ್ನು ಹೊಂದಿದೆ. ಕೀಬೋರ್ಡ್‌ನ ಇತಿಹಾಸವು ಟೈಪ್ ರೈಟರ್‌ಗೆ ಸಂಬಂಧಿಸಿದೆ. ಕಂಪ್ಯೂಟರ್ ಅಥವಾ ಕೀಬೋರ್ಡ್ ಬರುವ ಮೊದಲೇ QWERTY ಫಾರ್ಮ್ಯಾಟ್ ಚಾಲನೆಯಲ್ಲಿತ್ತು. 1868 ರಲ್ಲಿ, ಟೈಪ್ ರೈಟರ್ ಕಂಡುಹಿಡಿದ ಕ್ರಿಸ್ಟೋಫರ್ ಲ್ಯಾಥಮ್ ಶೋಲ್ಸ್ ಮೊದಲು ಎಬಿಸಿಡಿಇ ಫಾರ್ಮ್ಯಾಟ್ ನಲ್ಲಿ ಕೀಬೋರ್ಡ್ ತಯಾರಿಸಿದರು. ಆದರೆ ಅವರು ನಿರೀಕ್ಷಿಸಿದ ವೇಗ ಸಿಗಲಿಲ್ಲ.

 ಎಬಿಸಿಡಿ ಇರುವ ಕೀಬೋರ್ಡ್‌ನಿಂದಾಗಿ ಟೈಪ್ ರೈಟರ್‌ನಲ್ಲಿ ಬರೆಯಲು ಕಷ್ಟವಾಯಿತು. ಗುಂಡಿಗಳು ಒಂದಕ್ಕೊಂದು ಹತ್ತಿರದಲ್ಲಿದ್ದು ಟೈಪಿಂಗ್ ಕಷ್ಟವಾಗಿತ್ತು. ಇದರ ಜೊತೆಗೆ, ಇಂಗ್ಲಿಷ್‌ನಲ್ಲಿ E, I, S, M  ಅಕ್ಷರಗಳು ಹೆಚ್ಚು ಬಳಸಲ್ಪಡುತ್ತವೆ. ಕೆಲವು ಪದಗಳು Z, X ವಿರಳವಾಗಿದೆ. ಅಕ್ಷರ ಟೈಪ್ ಮಾಡಲು ಹೆಚ್ಚು ಬಾರಿ ಬೆರಳುಗಳನ್ನು ಚಲಿಸಬೇಕಾಗುತ್ತದೆ. ಇದ್ರಿಂದ ಟೈಪಿಂಗ್ ನಿಧಾನವಾಗುತ್ತದೆ. ಹಾಗಾಗಿ ಇದೆಲ್ಲ ಪ್ರಯೋಗದ ನಂತ್ರ 1870 ರ ದಶಕದಲ್ಲಿ QWERTY ಸ್ವರೂಪ ಬಂದಿತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read