ಮಂಗಳೂರು : ‘‘ಜಗತ್ತಿನೆಲ್ಲೆಡೆ ನಿನಗೆ ದುಷ್ಮನ್ ಗಳಿದ್ದಾರೆ, ಹರಕೆ ಕಟ್ಟಿಕೋ ‘’.! ಇದು ಪಂಜುರ್ಲಿ ದೈವ ನಟ ರಿಷಬ್ ಶೆಟ್ಟಿಗೆ ನೀಡಿದ ಎಚ್ಚರಿಕೆ.ಹೌದು, ಮಂಗಳೂರಿನ ಕದ್ರಿಯ ಬಾರೆಬೈಲ್ ನಲ್ಲಿ ನಡೆದ ವಾರ್ಷಿಕ ಉತ್ಸವದಲ್ಲಿ ನಟ ರಿಷಬ್ ಶೆಟ್ಟಿ ಭಾಗಿಯಾಗಿದ್ದರು. ಈ ವೇಳೆ ದೈವ ಪಂಜುರ್ಲಿ ರಿಷಬ್ ಶೆಟ್ಟಿಗೆ ಎಚ್ಚರಿಕೆ ಹಾಗೂ ಅಭಯವನ್ನು ನೀಡಿದೆ.
ಜಗತ್ತಿನೆಲ್ಲೆಡೆ ನಿನಗೆ ದುಷ್ಮನ್ ಗಳಿದ್ದಾರೆ, ಹರಕೆ ಕಟ್ಟಿಕೋ . ನಿನ್ನ ಸಂಸಾರ ಹಾಳು ಮಾಡಲು ಯತ್ನ ನಡೆಸಲಾಗುತ್ತದೆ. ನನಗೆ ಹರಕೆ ಕಟ್ಟಿಕೋ..5 ತಿಂಗಳಲ್ಲಿ ನಿನಗೆ ಒಳ್ಳೆದು ಮಾಡುತ್ತೇನೆ ಎಂದು ದೈವ ಎಚ್ಚರಿಕೆ ಕೊಟ್ಟು ಅಭಯ ನೀಡಿದೆ.ಯಾರು ನಿನಗೆ ಕೇಡು ಬಗೆದಿದ್ದಾರೆಂದು ಈಗ ಹೇಳಲ್ಲ, ನನಗೆ ಸೇವೆ ನೀಡುವ ಹರಕೆಯನ್ನು ಕಟ್ಟಿಕೋ ಎಂದು ದೈವ ಅಭಯ ನೀಡಿದೆ.
ಕಾಂತಾರ-1 ಚಿತ್ರದ ಶೂಟಿಂಗ್ ಆರಂಭವಾದಾಗಿನಿಂದ ಕೆಲವು ವಿಘ್ನಗಳು ಎದುರಾಗಿದ್ದವು. ಕಾಂತಾರ ಚಿತ್ರ ಕಲಾವಿದರಿದ್ದ ಬಸ್ ಪಲ್ಟಿಯಾಗಿತ್ತು. ಅಲ್ಲದೇ ರಿಷಬ್ ಶೆಟ್ಟಿ, ಚಿತ್ರತಂಡದ ವಿರುದ್ಧ ಹಲವು ದೂರುಗಳು ದಾಖಲಾಗಿತ್ತು. ಹೊಂಬಾಳೆ ಫಿಲಂಸ್ ನಿರ್ಮಾಣದ ‘ನಿರ್ಮಾಪಕ ರಿಷಬ್ ಶೆಟ್ಟಿ ನಿರ್ದೇಶನ ಮತ್ತು ನಟನೆಯ ಕಾಂತಾರ ಚಾಪ್ಟರ್ 1 ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದೆ. ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ, ಬೆಂಗಾಲಿ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ.