ಮಲಾಲಾ ಯೂಸುಫ್‌ಜಾಯ್ ಅವರು ಅತ್ಯಂತ ಕಿರಿಯ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ. 25 ವರ್ಷ ವಯಸ್ಸಿನ ಮಲಾಲಾ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮ್ಯಾನೇಜರ್ ಆಗಿರುವ ತಮ್ಮ ಪತಿ ಅಸ್ಸರ್ ಮಲಿಕ್ ಅವರೊಂದಿಗೆ ತಮ್ಮ ದೇಶೀಯ ಜೀವನದ ಒಂದು ನೋಟವನ್ನು ನೀಡುವ ಟ್ವೀಟ್ ಹಂಚಿಕೊಂಡಿದ್ದಾರೆ.
ಈಗ ವೈರಲ್ ಆದ ಟ್ವೀಟ್‌ನಲ್ಲಿ ಅವರು, “ಸೋಫಾದಲ್ಲಿ ಸಾಕ್ಸ್‌ಗಳು ಕಂಡುಬಂದಿವೆ. ಇದು ಪತಿಯದ್ದು. ಅವರು ಸಾಕ್ಸ್ ಕೊಳಕಾಗಿದೆ ಮತ್ತು ನಾನು ಅವುಗಳನ್ನು ಇನ್ನೊಮ್ಮೆ ಹಾಕಬಹುದು ಎಂದು ಹೇಳಿದರು. ಆದ್ದರಿಂದ ನಾನು ಅವುಗಳನ್ನು ತೆಗೆದುಕೊಂಡು (ಕಸದ) ತೊಟ್ಟಿಯಲ್ಲಿ ಹಾಕಿದೆ ಎಂದು ಬರೆದುಕೊಂಡಿದ್ದಾರೆ. ಸೋಫಾದ ಮೇಲೆ ಕೊಳಕು ಸಾಕ್ಸ್‌ಗಳನ್ನು ಇಟ್ಟುಕೊಳ್ಳುವುದರ ಬಗ್ಗೆ ತಮ್ಮ ಗಂಡನ ಅಸಡ್ಡೆ ಮಾಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ.
ಇದು ನೆಟ್ಟಿಗರ ಮನಸ್ಸು ಗೆದ್ದಿದೆ. ಅನೇಕ ಮಹಿಳೆಯರು ಮಲಾಲಾ ಅವರು ಮಾಡಿದ್ದು ಸರಿ ಇದೆ ಎಂದು ಹೇಳಿ ಕಮೆಂಟ್ ಹಾಕುತ್ತಿದ್ದಾರೆ. ಈ ಟ್ವೀಟ್ಗೆ ಪುರುಷರೂ ಸ್ವಲ್ಪ ವಿರೋಧ ವ್ಯಕ್ತಪಡಿಸಿ ಕಮೆಂಟ್ ಹಾಕುತ್ತಿದ್ದರೆ, ಮಹಿಳೆಯರಿಗಂತೂ ತುಂಬಾ ಖುಷಿ ಕೊಟ್ಟಿದೆ.
https://twitter.com/Malala/status/1622019276814049282?ref_src=twsrc%5Etfw%7Ctwcamp%5Etweetembed%7Ctwterm%5E1622019276814049282%7Ctwgr%5Ec62990b0b91374237f599a0f65170663f77acfc6%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-globally%2Fmalala-husbands-socks-raises-questions-about-domestic-responsibilities-8425596%2F