ʼಬೆಂಗಾಲಿʼ ಮಾತನಾಡಿದ್ದಕ್ಕೆ ಹಿಂದಿ ಬಲ್ಲ ಮಹಿಳೆ ಉದ್ದಟತನ; ನೀವು ಬಾಂಗ್ಲಾದಲ್ಲಿಲ್ಲ ಎಂದು ಅಪಹಾಸ್ಯ | Watch video

ಭಾಷೆ ವಿಚಾರಕ್ಕೆ ಸಂಬಂಧಿಸಿದಂತೆ ಆಗಾಗ ಘರ್ಷಣೆಗಳು ನಡೆಯುತ್ತಲೇ ಇರುತ್ತವೆ. ಹಿಂದಿ ರಾಷ್ಟ್ರ ಭಾಷೆ ಎಂಬ ಭ್ರಮೆಯಲ್ಲಿರುವ ಕೆಲವರು, ಅದನ್ನು ಪ್ರತಿಪಾದಿಸಲು ಹೋದಾಗ ಅಪಹಾಸ್ಯಕ್ಕೊಳಗಾಗುತ್ತಾರೆ. ಇದೇ ರೀತಿ ಬೆಂಗಾಲಿ ಭಾಷೆ ಮಾತನಾಡುವವರನ್ನು ಅಪಹಾಸ್ಯ ಮಾಡಲು ಹೋಗಿ ಮಹಿಳೆಯೊಬ್ಬರು ಸ್ವತಃ ಅಪಹಾಸ್ಯಕ್ಕೊಳಗಾಗಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಕೋಲ್ಕತ್ತಾ ಮೆಟ್ರೋದಲ್ಲಿ ಭಾಷೆಯ ಬಗ್ಗೆ ನಡೆದ ವಾದ – ವಿವಾದ ವೈರಲ್ ವೀಡಿಯೊದಲ್ಲಿ ಸೆರೆಯಾಗಿದ್ದು, ಹಿಂದಿ ಮಾತನಾಡುವ ಮಹಿಳೆಯೊಬ್ಬರು ಬಂಗಾಳಿ ಪ್ರಯಾಣಿಕರನ್ನು ನೀವು ಹಿಂದಿ ಮಾತನಾಡುವುದಿಲ್ಲ ಎಂದು ಅಪಹಾಸ್ಯ ಮಾಡಿದ್ದಾರೆ.

ಕೋಲ್ಕತ್ತಾ ಮೆಟ್ರೋದಲ್ಲಿದ್ದ ಈ ಮಹಿಳೆ, ಬಂಗಾಳಿ ಪ್ರಯಾಣಿಕರನ್ನು ಹಿಂದಿ ಗೊತ್ತಿಲ್ಲದ ಕಾರಣ ಅಪಹಾಸ್ಯ ಮಾಡಿದ್ದು ವೈರಲ್ ಆಗಿದೆ. ನೀವು ಭಾರತದಲ್ಲಿದ್ದೂ ನಿಮಗೆ ಹಿಂದಿ ಗೊತ್ತಿಲ್ಲ, ನೀವು ಬಾಂಗ್ಲಾದೇಶದಲ್ಲಿ ವಾಸಿಸುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಇದಕ್ಕೆ ಉತ್ತರಿಸಿದ ಇನ್ನೊಬ್ಬ ಮಹಿಳೆ, “ನಾನು ಪಶ್ಚಿಮ ಬಂಗಾಳದಲ್ಲಿ ವಾಸಿಸುತ್ತಿದ್ದೇನೆ; ಇದು ನನ್ನ ರಾಜ್ಯ; ಇದು ನನ್ನ ಮೆಟ್ರೋ, ನನ್ನ ತೆರಿಗೆಯಿಂದ ನಿರ್ಮಿಸಲ್ಪಟ್ಟಿದೆ, ನಿಮ್ಮದಲ್ಲ……. ನೀವು ನನ್ನನ್ನು ಅವಮಾನಿಸಲು ಅಥವಾ ಬಾಂಗ್ಲಾದೇಶಿ ಎಂದು ಕರೆಯಲು ಸಾಧ್ಯವಿಲ್ಲ” ಎಂದು ಹೇಳುವುದು ವಿಡಿಯೋದಲ್ಲಿ ಕೇಳಿಬರುತ್ತದೆ. ಆಗ ಹಿಂದಿ ಮಾತನಾಡುವ ಮಹಿಳೆ  “ಪಶ್ಚಿಮ ಬಂಗಾಳ ಭಾರತದಲ್ಲಿದೆ. ಆದ್ದರಿಂದ, ಜನರು ಭಾರತದ ಅಧಿಕೃತ ಭಾಷೆಯಾದ ಹಿಂದಿಯಲ್ಲಿ ಮಾತನಾಡಬೇಕು.” ಎಂದಿದ್ದಾರೆ.

ಬೆಂಗಾಲಿ ಮಹಿಳೆಯ ಫೋನ್‌ನಲ್ಲಿ ವಿಡಿಯೋ ರೆಕಾರ್ಡ್ ಆಗಿದ್ದು, ಹಿಂದಿ ಮಾತನಾಡುವ ಮಹಿಳೆ “ಸಮ್ಮತಿಯಿಲ್ಲದೆ ರೆಕಾರ್ಡಿಂಗ್” ಮಾಡಿದ್ದಕ್ಕಾಗಿ ನಿಮ್ಮ ಮೇಲೆ ಮೊಕದ್ದಮೆ ಹೂಡುವುದಾಗಿ ಬೆದರಿಕೆ ಹಾಕಿದ್ದಾರೆ.

ಭಾರತದಲ್ಲಿ ರಾಷ್ಟ್ರೀಯ ಭಾಷೆ ಇದೆಯೇ ?

ಭಾರತದಲ್ಲಿ ರಾಷ್ಟ್ರೀಯ ಭಾಷೆ ಇಲ್ಲ. ಹಿಂದಿ ವ್ಯಾಪಕವಾಗಿ ಮಾತನಾಡುವ ಭಾಷೆಯಾಗಿದ್ದರೂ, ಅದು ರಾಷ್ಟ್ರೀಯ ಭಾಷೆಯಲ್ಲ. ಭಾರತದ ಸಂವಿಧಾನದ ಎಂಟನೇ ಶೆಡ್ಯೂಲ್ ಪ್ರಕಾರ ಭಾರತದಲ್ಲಿ ಒಟ್ಟು 22 ಭಾಷೆಗಳಿಗೆ ಮಾನ್ಯತೆ ಪಡೆದ ಭಾಷೆಗಳ ಸ್ಥಾನಮಾನವನ್ನು ನೀಡಲಾಗಿದೆ.

ಅಧಿಕೃತ ಭಾಷೆಗಳ ಕಾಯಿದೆ, 1963 ರ ಪ್ರಕಾರ, ಹಿಂದಿ ಮತ್ತು ಇಂಗ್ಲಿಷ್ ಭಾರತದ ಅಧಿಕೃತ ಭಾಷೆಗಳು. ಇದರರ್ಥ ಅದು ರಾಷ್ಟ್ರೀಯ ಭಾಷೆಯಲ್ಲ, ಆದರೆ ಈ ಎರಡನ್ನು ಎಲ್ಲಾ ಅಧಿಕೃತ ಸರ್ಕಾರ, ಆಡಳಿತಾತ್ಮಕ ಮತ್ತು ನ್ಯಾಯಾಂಗ ಸಂವಹನಗಳಿಗೆ ಬಳಸಬಹುದು. ಸಂವಿಧಾನದಲ್ಲಿ ಭಾಷೆಗಳ ಯಾವುದೇ ಆದ್ಯತೆಗೆ ಅವಕಾಶವಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read