ಬೆಂಗಳೂರು: ಧಾರವಾಡದ ಬಿಜೆಪಿ ಮುಖಂಡ ಯೋಗೀಶ್ ಗೌಡರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳಿಗೆ 1 ಲಕ್ಷ ರೂಪಾಯಿ ಆಮಿಷವೊಡ್ಡಿದ ಆರೋಪದಲ್ಲಿ ಶಾಸಕ ವಿನಯ್ ಕುಲಕರಣಿ ಜಾಮೀನು ರದ್ದು ಕೋರಿ ಸಿಬಿಐ ಸಲ್ಲಿದ್ದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ.
ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ, ವಿನಯ್ ಕುಲಕರ್ಣಿ ಜಾಮೀನು ರದ್ದುಪಡಿಸಲು ನಿರಾಕರಿಸಿದೆ. ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿರುವುದರಿಂದ ಸೆಷನ್ಸ್ ಕೋರ್ಟ್ ಜಾಮೀನು ರದ್ದುಪಡಿಸಲು ತೀರ್ಮಾನಿಸುವುದು ಸರಿಯಲ್ಲ ಎಂದು ಜಡ್ಜ್ ಸಂತೋಷ್ ಗಜಾನನ ಭಟ್ ಆದೇಶ ನೀಡಿದ್ದಾರೆ.
ಆದರೆ ಎ16 ಚಂದ್ರಶೇಖರ್ ಇಂಡಿ ಜಾಮೀನು ರದ್ದುಗೊಳಿಸಿ ಕೋರ್ಟ್ ಆದೇಶ ಹೊರಡಿಸಿದೆ. ಇದೇ ವೇಳೆ ಎ9 ಎಸ್.ಅಶ್ವಥ್ಥ ಜಾಮೀನು ರದ್ದತಿಗೂ ಕೋರ್ಟ್ ನಿರಾಕರಿಸಿದೆ. ಬೆದರಿಕೆ ಹಾಕಿದಾಗ ಬಸವರಾಜ್ ಮುತ್ತಗಿ ಮಾಫಿ ಸಾಕ್ಷಿಯಾಗಿರಲಿಲ್ಲ. ಹಾಗಾಗಿ ಸಾಕ್ಷಿ ಬೆದರಿಕೆ ಆಧಾರದಲ್ಲಿ ಜಾಮೀನು ರದ್ದಿಗೆ ಕೋರ್ಟ್ ನಿರಾಕರಿಸಿದೆ.