ಪ್ರೀ ವೆಡ್ಡಿಂಗ್ ಶೂಟ್ಗಳು ಈಗ ಮಾಮೂಲು. ಆದರೆ ಇಲ್ಲೊಂದು ಜೋಡಿ ವಿಭಿನ್ನವಾಗಿ ಫೋಟೋಶೂಟ್ ಮಾಡಿಸಿಕೊಂಡಿದೆ. ಅದೀಗ ಭಾರಿ ವೈರಲ್ ಆಗಿದೆ.
ದೇವಾಲಯದ ಎದುರಿಗೆ ಈ ಜೋಡಿ ಶೂಟಿಂಗ್ ಮಾಡಿಸಿಕೊಂಡಿದೆ. ವರ ತಲೆಕೆಳಗಾಗಿ ನಿಂತು ಯೋಗ ಮಾಡುತ್ತಿದ್ದರೆ, ವಧು ಭರತನಾಟ್ಯ ಶೈಲಿಯಲ್ಲಿ ಪೋಸ್ ಕೊಟ್ಟಿದ್ದಾಳೆ. ಇಬ್ಬರೂ ವಧು-ವರರ ಡ್ರೆಸ್ನಲ್ಲಿ ಇದ್ದಾರೆ. ಕೆಲ ಸೆಕೆಂಡುಗಳವರೆಗೆ ವರ ತಲೆ ಕೆಳಗಾಗಿ ನಿಂತುಕೊಂಡಿದ್ದು ನೆಟ್ಟಿಗರ ಗಮನ ಸೆಳೆಯುತ್ತಿದೆ.
ಇದು ಚೆನ್ನೈನಲ್ಲಿ ತೆಗೆಸಿರುವಂತೆ ಕಾಣುತ್ತದೆ. ಆದರೆ ಇದು ಪ್ರೀ ವೆಡ್ಡಿಂಗ್ ಶೂಟ್ ಎಂದು ಕೆಲವರು ಹೇಳುತ್ತಿದ್ದರೆ, ಮದುವೆಯಾದ ಮೇಲೆ ಜೋಡಿ ಹೊಸ ರೀತಿಯಲ್ಲಿ ಯೋಚನೆ ಮಾಡಿ ಫೋಟೋ ಶೂಟ್ ಮಾಡಿಸಿಕೊಂಡಿರಬಹುದು ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಜೋಡಿಯ ವಿಭಿನ್ನ ಆಲೋಚನೆಯಿಂದಾಗಿ ಈ ವಿಡಿಯೋ ಭಾರಿ ವೈರಲ್ ಆಗುತ್ತಿದೆ.
Day by day pre Wedding Shoots are getting tougher.!!!😂😂😂 pic.twitter.com/wbI13bsL1p
— Poonam Datta (@Poonam_Datta) March 10, 2023