ಶಾಸಕ ಯತ್ನಾಳ್ ಹತ್ಯೆಗೆ ಸಂಚು? ಯುವಕನ ಆಡಿಯೋ ವೈರಲ್

ವಿಜಯಪುರ: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹತ್ಯೆಗೆ ಸಂಚು ನಡೆದಿತ್ತು ಎಂಬ ಆರೋಪ ಕೇಳಿಬಂದಿದೆ.

ಶಾಸಕ ಯತ್ನಾಳ್ ಪ್ರವಾದಿ ಮೊಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಯತ್ನಾಳ್ ಹತ್ಯೆಗೆ ಸಂಚು ನಡೆದಿತ್ತು ಎನ್ನಲಾಗಿದೆ. ಈ ಬಗ್ಗೆ ಮುಸ್ಲಿಂ ಯುವಕನೊಬ್ಬನ ಆಡಿಯೋ ಸಂಭಾಷಣೆಯ ಹೇಳಿಕೆ ವೈರಲ್ ಆಗಿದೆ.

ಹುಬ್ಬಳ್ಳಿಯ ಬಾಣಿ ಓಣಿಯಲ್ಲಿ ರಾಮನವಮಿ ಕಾರ್ಯಕ್ರಮದಲ್ಲಿ ಪಲಗೊಂಡಿದ್ದ ಯತ್ನಾಳ್, ಪ್ರವಾದಿ ಮೊಹಮ್ಮದ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಯತ್ನಾಳ್ ವಿರುದ್ಧ ಪ್ರತಿಭಟನೆಗೆ ಸಜ್ಜಾಗಿ ಎಂದು ಯುವಕನೊಬ್ಬ ಕರೆ ನೀಡಿರುವ ಆಡಿಯೋ ವಿಜಯಪುರದಲ್ಲಿ ಆತಂಕ ಮೂಡಿಸಿದೆ.

ಏ.15ರಂದು ವಿಜಯಪುರ ಬಂದ್ ಗೆ ನಿರ್ಧರಿಸಲಾಗಿದೆ. ಯತ್ನಾಳ್ ಅಗೆ ಅಂದು ಫೈನಲ್ ದಿನ. ಯತ್ನಾಳ್ ಹೇಳಿಕೆ ಖಂಡಿಸಿ ಈ ಬಮ್ದ್ ನಡೆಯಲಿದ್ದು, ಒಂದು ಲಕ್ಷ ಜನರು ಈ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ರ್ಯಾಲಿ ನೇರವಾಗಿ ಆತನ ಮನೆಗೆ ತೆರಳಬೇಕು. ಈ ಬಾರಿ ಆತನದ್ದು ಫೈನಲ್ ದಿನವಿದೆ. ಇಷ್ಟು ಸಲ ಅವನ ವಿರುದ್ಧ ದೂರು ನೀಡುತ್ತಿದ್ದೆವು. ಆತ ಬೇಲ್ ಮೇಲೆ ಹೊರಬರುತ್ತಿದ್ದ. ಆ ಬಾರಿ ಹಾಗೆ ಆಗಲ್ಲ. ಈ ಬಾರಿ ಅವನು ಅರೆಸ್ಟ್ ಆಗಬೇಕು. ಇಲ್ಲ ಅವನ ರುಂಡ ದೇಹದಿಂದ ಇಬ್ಭಾಗ ಆಗಬೇಕು. ಮುಸ್ಲಿಂ ಸದಸ್ಯರು, ಅಕ್ಕ-ತಂಗಿಯರು ಎಲ್ಲರೂ ಸಿದ್ಧರಾಗಿ. ಅದು ಅಮ್ಬೇಡ್ಕರ್ ವೃತ್ತದಲ್ಲಿ ಎಲ್ಲರೂ ಜಮಾವನೆ ಆಗಿ ಎಂದು ಯುವಕನೊಬ್ಬ ಹೇಳಿರುವ ಆಡೀಯೋ ವೈರಲ್ ಆಗಿದೆ.

ಈ ಆಡಿಯೋ ಯತ್ನಾಳ್ ಹತ್ಯೆಗೆ ಸಂಚು ನಡೆದಿತ್ತು ಎಂಬ ಆರೋಪಕ್ಕೆ ಇನ್ನಷ್ಟು ಪುಷ್ಠಿ ನೀಡಿದಂತಿದೆ. ವಿಜಯಪುರದಲ್ಲಿ ಆಡಿಯೋ ಭಾರಿ ಆತಂಕ ಸೃಷ್ಟಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read