BIG NEWS: ನಾನು ಸಿಎಂ ಆದರೆ ಪೊಲೀಸರಿಗೆ AK47 ಗನ್ ಬಳಕೆಗೆ ಅನುಮತಿ ಕೊಡುತ್ತೇನೆ: ಯತ್ನಾಳ್ ಹೇಳಿಕೆ

ಬೆಳಗಾವಿ: ನಾನು ಮುಖ್ಯಮಂತ್ರಿಯಾದರೆ ಪೊಲೀಸರಿಗೆ AK47 ಗನ್ ಬಳಕೆಗೆ ಅನುಮತಿ ಕೊಡುತ್ತೇನೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ಮಾತನಾಡಿದ ಶಾಸಕ ಯತ್ನಾಳ್, ನಾನು ಸಿಎಂ ಆದ್ರೆ ಪೊಲಿಸರಿಗೆ AK47 ಗನ್ ಗೆ ಅನುಮತಿ ಕೊಡುತ್ತೇನೆ. ಪಾಕಿಸ್ತಾನ ಜಿಂದಾಬಾದ್ ಎಂದು ಕೂಗುವ ಮೊದಲೇ ಫೈರಿಂಗ್ ಮಾಡುತ್ತೇವೆ ಎಂದು ಹೇಳಿದ್ದಾರೆ.

ನಮ್ಮ ಕೈಗೆ ಅಧಿಕಾರ ಕೊಟ್ಟು ನೋಡಿ. ಅಲ್ಲಿ ಯೋಗಿ, ಇಲ್ಲಿ ನಾವು. ಮುಂದಿನ ಬಾರಿ ನಮ್ಮ ಸರ್ಕಾರ ಬಂದಾಗ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಒಂದೇ ಒಂದು ಕಲ್ಲು ಬಿದ್ದರೂ ಸೀದಾ ಜನ್ನತ್. ಪ್ರಧಾನಿ ಮೋದಿಯವರು ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ಪ್ರಯಾಸ್ ಎನ್ನುತಾರೆ. ಆದರೆ ನಮ್ಮ ಮಾತು ಬದಲಾಗುತ್ತದೆ. ಹಿಂದೂವೋಂಕೆ ಸಾಥ್, ಹಿಂದೂವೋಂಕೆ ವಿಕಾಸ್, ದೇಶ ದ್ರೋಹಿಯೋಂಕೋ ಲಾಥ್ ಎಂದು ಹೇಳಿದರು.

ಪ್ರಧಾನಿ ಮೋದಿ ಅಗ್ನಿವೀರರನ್ನು ತಯಾರು ಮಾಡುತ್ತಿದ್ದಾರೆ. ನಾಲ್ಕು ವರ್ಷ ಆದ ಮೆಲೆ ಬಳಿಕ ಅವರು ನಮ್ಮ ಊರಿಗೆ ವಾಪಾಸ್ ಆಗುತ್ತಾರೆ. ನಾನು ಮುಖ್ಯಮಂತ್ರಿಯಾದರೆ. ನಾನು ಸಿಎಂ ಆದರೆ ನಿವೃತ್ತ ಅಗ್ನಿವೀರರಿಗೆ 25 ಲಕ್ಷ ಹಣ ಕೊಡುತ್ತೇನೆ. ನಿವೆಲ್ಲ ಗಟ್ಟಿಯಾಗಿರಿ ಕರ್ನಾಟಕದಲ್ಲಿ ಹಿಂದೂರಾಜ್ಯ ತರೋಣ. ಶಿವಾಜಿ, ಕಿತ್ತೂರು ಚನ್ನಮ್ಮ, ಬೆಳವಡಿ ಮಲ್ಲಮ್ಮರಂತೆ ಆಡಳಿತ ನಡೆಸೋಣ. ಸಾಯೋದಂತು ಪಕ್ಕಾ, ನಾಲ್ಕು ಹೊಡೆದೇ ಹೋಗುತೇನೆ ಎಂದು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read