GOOD NEWS: ಯಶಸ್ವಿನಿ ಯೋಜನೆಯಡಿ 200ಕ್ಕೂ ಅಧಿಕ ಚಿಕಿತ್ಸೆ ದರ ಪರಿಷ್ಕರಣೆ: ರಾಜ್ಯಾದ್ಯಂತ ಆಸ್ಪತ್ರೆ ಜಾಲ ವಿಸ್ತರಣೆ

ಬೆಂಗಳೂರು: ಯಶಸ್ವಿನಿ ಯೋಜನೆ ಚಿಕಿತ್ಸೆಗಳ ದರವನ್ನು ರಾಜ್ಯ ಸರ್ಕಾರ ಪರಿಷ್ಕರಿಸಿದ್ದು, ಯೋಜನೆಯ ನೋಂದಣಿಗೆ ಖಾಸಗಿ ಆಸ್ಪತ್ರೆಗಳು ಆಸಕ್ತಿ ತೋರಿಸುತ್ತಿರುವ ಕಾರಣ ಯಶಸ್ವಿನಿ ಯೋಜನೆಯಡಿ ಚಿಕಿತ್ಸೆ ನೀಡುವ ಆಸ್ಪತ್ರೆಗಳ ಜಾಲ ವಿಸ್ತರಣೆಯಾಗುತ್ತಿದೆ.

ಸಹಕಾರ ಸಂಘಗಳ ಸದಸ್ಯರು ಮತ್ತು ಅವರ ಕುಟುಂಬದವರ ಹಿತದೃಷ್ಟಿಯಿಂದ 2023ರ ಜನವರಿಯಲ್ಲಿ ಯಶಸ್ವಿನಿ ಸಹಕಾರಿ ಸದಸ್ಯರ ಆರೋಗ್ಯ ರಕ್ಷಣಾ ಟ್ರಸ್ಟ್ ಮೂಲಕ ಯೋಜನೆಗೆ ಮರು ಚಾಲನೆ ನೀಡಲಾಗಿದೆ. ಚಿಕಿತ್ಸಾ ಪ್ಯಾಕೇಜ್ ದರ ಕಡಿಮೆ ಇದೆ ಎನ್ನುವ ಕಾರಣಕ್ಕೆ ಯೋಜನೆಯಡಿ ನೋಂದಣಿಗೆ ಖಾಸಗಿ ಆಸ್ಪತ್ರೆಗಳು ಆಸಕ್ತಿ ತೋರಿಸಲಿಲ್ಲ.

ಇದರಿಂದಾಗಿ ಸರ್ಕಾರ ಹಲವು ಚಿಕಿತ್ಸೆಗಳ ದರ ಪರಿಷ್ಕರಿಸಿದ್ದು, ಶೇಕಡ 300 ರಷ್ಟರವರೆಗೂ ದರ ಹೆಚ್ಚಳ ಮಾಡಿದೆ. ಹೀಗಾಗಿ ಯೋಜನೆ ಆರಂಭದ ಅವಧಿಯಲ್ಲಿ 370 ಇದ್ದ ಖಾಸಗಿ ಆಸ್ಪತ್ರೆಗಳ ಸಂಖ್ಯೆ ಈಗ 600 ಕ್ಕೂ ಅಧಿಕವಾಗಿದೆ. ಯಶಸ್ವಿನಿ ಯೋಜನೆಯಡಿ ಫಲಾನುಭವಿಗಳು ಗರಿಷ್ಠ 5 ಲಕ್ಷ ರೂಪಾಯಿವರೆಗೆ ನಗದು ರಹಿತ ಚಿಕಿತ್ಸೆ ಪಡೆದುಕೊಳ್ಳಬಹುದು. ನೆಟ್ವರ್ಕ್ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯಬಹುದಾಗಿದ್ದು, ಯೋಜನೆಯ ಫಲಾನುಭವಿಗಳಿಗೆ ಸುಲಭವಾಗಿ ಚಿಕಿತ್ಸೆ ದೊರೆಯುತ್ತಿದೆ. ಯಶಸ್ವಿನಿ ಯೋಜನೆ ಮರು ಜಾರಿಯಾದ ಬಳಿಕ 478 ಚಿಕಿತ್ಸೆಗಳನ್ನು ಹೆಚ್ಚುವರಿಯಾಗಿ ಅಳವಡಿಸಿಕೊಳ್ಳಲಾಗಿದ್ದು, ಒಟ್ಟು ಚಿಕಿತ್ಸೆಗಳ ಸಂಖ್ಯೆ 2 ಸಾವಿರದ ಗಡಿ ದಾಟಿದೆ. ಇದರಿಂದ ಸಹಕಾರಿ ಸದಸ್ಯರಿಗೆ ಅನುಕೂಲವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read