‘ಟೀಮ್ ಇಂಡಿಯಾ’ ಟೆಸ್ಟ್ ತಂಡಕ್ಕೆ ಪಾನಿಪುರಿ ಮಾರಾಟಗಾರನ ಪುತ್ರ; ಮಗ ಆಯ್ಕೆಯಾದ ಸುದ್ದಿ ತಿಳಿಯುತ್ತಿದ್ದಂತೆ ಆನಂದಭಾಷ್ಪ ಸುರಿಸಿದ ಯಶಸ್ವಿ ಜೈಸ್ವಾಲ್ ತಂದೆ

ಕಳೆದ ಮೂರು ವರ್ಷಗಳಿಂದ ದೇಶಿ ಕ್ರಿಕೆಟ್ ನ ಎಲ್ಲ ಮಾದರಿಗಳು ಮತ್ತು ಐಪಿಎಲ್ ನಲ್ಲಿ ತಮ್ಮ ಬ್ಯಾಟಿಂಗ್ ಕೌಶಲ್ಯ ಪ್ರದರ್ಶಿಸಿರುವ ಯಶಸ್ವಿ ಜೈಸ್ವಾಲ್ ಈಗ ವೆಸ್ಟ್ ಇಂಡೀಸ್ ನಲ್ಲಿ ನಡೆಯಲಿರುವ ಟೆಸ್ಟ್ ಸರಣಿಗಾಗಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಮಗ ಆಯ್ಕೆಯಾದ ಸುದ್ದಿ ತಿಳಿಯುತ್ತಿದ್ದಂತೆ ಯಶಸ್ವಿ ಜೈಸ್ವಾಲ್ ಅವರ ತಂದೆ ಆನಂದಭಾಷ್ಪ ಸುರಿಸಿದ್ದಾರೆ.

ಮೂಲತಃ ಉತ್ತರಪ್ರದೇಶದ ಬಡೋಯಿ ಗ್ರಾಮದವರಾದ ಯಶಸ್ವಿ ಜೈಸ್ವಾಲ್ ಅವರ ತಂದೆ ಪಾನಿಪುರಿ ಮಾರಾಟಗಾರರಾಗಿದ್ದಾರೆ. ಮುಂಬೈನ ಆಜಾದ್ ಮೈದಾನದ ಪಕ್ಕದಲ್ಲಿದ್ದ ಕಾರ್ಮಿಕರ ಟೆಂಟ್ ನಲ್ಲಿ ವಾಸವಾಗಿದ್ದ ಯಶಸ್ವಿ ಜೈಸ್ವಾಲ್ ಕ್ರಿಕೆಟ್ ಅಭ್ಯಾಸದ ಜೊತೆಗೆ ತನ್ನ ತಂದೆಯೊಂದಿಗೆ ಪಾನಿಪುರಿ ಅಂಗಡಿ ಕೆಲಸದಲ್ಲೂ ನೆರವಾಗುತ್ತಿದ್ದರು.

21 ವರ್ಷದ ಯಶಸ್ವಿ ಜೈಸ್ವಾಲ್ ಅವರ ಯಶಸ್ಸಿನ ಹಿಂದೆ ಕೋಚ್ ಜ್ವಾಲಾ ಸಿಂಗ್ ಅವರ ಪರಿಶ್ರಮವೂ ಇದ್ದು, ತಮ್ಮ ಶಿಷ್ಯ ಟೀಮ್ ಇಂಡಿಯಾ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿರುವ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ. ಕಡು ಬಡತನದ ನಡುವೆಯೂ ಈ ಹಂತಕ್ಕೆ ಏರಿರುವ ಯಶಸ್ವಿ ಜೈಸ್ವಾಲ್ ತಮ್ಮ ತಂದೆ ಸೇರಿದಂತೆ ಕುಟುಂಬ ಸದಸ್ಯರ ಸಹಕಾರವನ್ನು ಸ್ಮರಿಸಿಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read