‘ಸರ್ಕಾರಿ ಕೆಲಸ ದೇವರ ಕೆಲಸ’ ಎಂಬ ಮಾತಿದೆ. ಸರ್ಕಾರಿ ಕೆಲಸ ಸಿಗುವುದು ಸುಲಭದ ಮಾತಲ್ಲ. ಆದರೆ ಇಲ್ಲೋರ್ವ ರೈಲ್ವೇ ಸಿಬ್ಬಂದಿ ಫೋನ್ ನಲ್ಲಿ ಮಾತನಾಡುತ್ತಾ ಹರಟೆ ಹೊಡೆಯುತ್ತಾ ಪ್ರಯಾಣಿಕರಿಗೆ ಟಿಕೆಟ್ ಕೊಡಲು ಸತಾಯಿಸಿದ್ದಾನೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವ್ಯಾಪಕ ಟೀಕೆಗೆ ಕಾರಣವಾಗಿದೆ.ಕರ್ನಾಟಕದ ಯಾದಗಿರಿ ರೈಲ್ವೆ ನಿಲ್ದಾಣವೊಂದರಲ್ಲಿ ಟಿಕೆಟ್ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದ ಕ್ಲರ್ಕ್, ಕರ್ತವ್ಯದ ಸಮಯದಲ್ಲಿ ಫೋನ್ ಕರೆ ಸ್ವೀಕರಿಸಿ ಪ್ರಯಾಣಿರನ್ನು ಸತಾಯಿಸಿದ್ದಾರೆ. ಪ್ರಯಾಣಿಕರ ಉದ್ದನೆಯ ಸರತಿ ಸಾಲನ್ನು ನಿರ್ಲಕ್ಷಿಸಿ ಈತ ಫೋನ್ ನಲ್ಲಿ ಮಾತನಾಡುವುದರಲ್ಲಿ ಮಗ್ನನಾಗಿದ್ದನು. ಓರ್ವ ಪ್ರಯಾಣಿಕ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾನೆ. ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಅವರನ್ನು ಬುಧವಾರ ಅಮಾನತುಗೊಳಿಸಲಾಗಿದೆ.
This is the normal behaviour of most Hindi officers living in Karnataka!!
— ರವಿ-Ravi ಆಲದಮರ (@AaladaMara) July 29, 2025
Don't know Kannada!
Don't know the behaviour!!
Treating Kannadigaru like a slave!! pic.twitter.com/CJNohHHjgW