ಮದುವೆ ನಂತರವೂ ಪ್ರೀತಿ ಮುಂದುವರೆಸಿದ ಯುವತಿ ಪ್ರಿಯಕರನೊಂದಿಗೆ ಸೇರಿ ದುಡುಕಿನ ನಿರ್ಧಾರ

ಯಾದಗಿರಿ: ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಹುರುಸಗುಂಡಗಿ ಗ್ರಾಮದಲ್ಲಿ ನಡೆದಿದೆ.

22 ವರ್ಷದ ಯುವಕ ಹಾಗೂ 20 ವರ್ಷದ ಯುವತಿ ಆತ್ಮಹತ್ಯೆ ಮಾಡಿಕೊಂಡವರು. 6 -7 ವರ್ಷಗಳಿಂದ ಇಬ್ಬರು ಪ್ರೀತಿಸುತ್ತಿದ್ದರು. ಆದರೆ, ಮನೆಯವರಿಗೆ ವಿಚಾರ ತಿಳಿಸಿರಲಿಲ್ಲ, ಅವರಿಗೂ ಗೊತ್ತಿರಲಿಲ್ಲ. ವಡಗೇರಾ ತಾಲೂಕಿನ ಗೋಡಿಹಾಳ ಗ್ರಾಮದ ಯುವಕನೊಂದಿಗೆ ಯುವತಿ ಮದುವೆ ಮಾಡಲಾಗಿದೆ. ದಂಪತಿ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.

ಗಂಡನಿಗೆ ಗೊತ್ತಾಗದಂತೆ ಯುವತಿ ಆಗಾಗ ಪ್ರಿಯಕರನನ್ನು ಭೇಟಿಯಾಗುತ್ತಿದ್ದಳು. ದೇವರ ದರ್ಶನಕ್ಕೆ ಹೋಗುವುದಾಗಿ ಬೆಂಗಳೂರಿಗೆ ತೆರಳಿ ಯುವತಿ ಭೇಟಿಯಾದ ಪ್ರಿಯಕರ ಆಕೆಯೊಂದಿಗೆ ಊರಿಗೆ ಮರಳಿದ್ದಾನೆ. ಬೆಳಗಿನ ಜಾವ ಗ್ರಾಮದ ಹೊರವಲಯದ ಹಳ್ಳದ ಬಳಿ ಇಬ್ಬರೂ ವಿಷ ಸೇವಿಸಿದ್ದಾರೆ. ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದು, ಯುವಕ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಪ್ರೀತಿಸಿದ್ದರೂ ಮನೆಯವರಿಗೆ ವಿಷಯ ತಿಳಿಸದಿರುವುದೇ ದುರಂತಕ್ಕೆ ಕಾರಣವೆನ್ನಲಾಗಿದೆ. ಭೀಮರಾಯನಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read