ಕೈಯಿಂದ ಆಹಾರ ತಿನ್ನುತ್ತಿದ್ದ ಮಹಿಳೆ ವಿಡಿಯೋ ಪೋಸ್ಟ್ ಮಾಡಿ ಲೇವಡಿ; ನಿನಗ್ಯಾಕೆ ಬೇಕು ಎಂದು ನೆಟ್ಟಿಗರ ತರಾಟೆ

ವಿಮಾನ ನಿಲ್ದಾಣದಲ್ಲಿ ಮಹಿಳೆಯೊಬ್ಬರು ತಮ್ಮ ಕೈಗಳಿಂದ ಆಹಾರ ತಿನ್ನುತ್ತಿರುವುದನ್ನ ಟೀಕಿಸಿ ವಿಡಿಯೋ ಪೋಸ್ಟ್ ಮಾಡಿದವರನ್ನ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

JusB ಎಂಬ ಹೆಸರಿನ ಬಳಕೆದಾರರು ಮಹಿಳೆಯ ವೀಡಿಯೊವನ್ನು ರೆಕಾರ್ಡ್ ಮಾಡಿ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋ ಇಲ್ಲಿಯವರೆಗೆ 24 ಮಿಲಿಯನ್ ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ.

“ಯಾಕೆ, ಈ ಮಹಿಳೆ ನನ್ನ ಪಕ್ಕದಲ್ಲಿ ಕುಳಿತು ತನ್ನ ಕೈಗಳಿಂದ ತಿನ್ನುತ್ತಿದ್ದಳು? ವಿಮಾನ ನಿಲ್ದಾಣದಲ್ಲಿ,” ಎಂದು ಅಮೆರಿಕಾ ಮೂಲದವರೆಂದು ತಿಳಿಯಲಾದ ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಮಹಿಳೆಯನ್ನು ಟೀಕಿಸಿ ಬರೆದಿದ್ದಾರೆ.

ವೀಡಿಯೋದಲ್ಲಿ ಮಹಿಳೆಯೊಬ್ಬರು ಮೇಜಿನ ಮೇಲಿರುವ ತಟ್ಟೆಯಲ್ಲಿದ್ದ ಅನ್ನವನ್ನ ತಮ್ಮ ಕೈಯಿಂದ ತಿನ್ನುತ್ತಿದ್ದಾರೆ. ಆದರೆ ಆಕೆಯ ಗುರುತು ಬಹಿರಂಗಗೊಂಡಿಲ್ಲ.

ವೀಡಿಯೊ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಮಾಧ್ಯಮ ಬಳಕೆದಾರರು ಪೋಸ್ಟ್ ನ ಕಾಮೆಂಟ್‌ಗಳ ವಿಭಾಗದಲ್ಲಿ ಟ್ವಿಟರ್ ಬಳಕೆದಾರರನ್ನು ಖಂಡಿಸಿದ್ದಾರೆ. ಪೋಸ್ಟ್ ನ ಹಾಸ್ಯಾಸ್ಪದ ಎಂದು ಕರೆದಿದ್ದು ಮಹಿಳೆಯನ್ನು ಅವರ ಒಪ್ಪಿಗೆಯಿಲ್ಲದೆ ಚಿತ್ರೀಕರಿಸಲಾಗಿದೆ ಮತ್ತು ಆಕೆಯ ಗೌಪ್ಯತೆಯ ಮೇಲೆ ಆಕ್ರಮಣ ಮಾಡಲಾಗಿದೆ ಎಂದು ಖಂಡಿಸಿದ್ದಾರೆ. ಕೆಲವು ಸಂಸ್ಕೃತಿಗಳಲ್ಲಿ ಕೈಯಿಂದ ಆಹಾರ ತಿನ್ನಲಾಗುತ್ತದೆ. ಅದನ್ನು ತಪ್ಪಾಗಿ ಬಿಂಬಿಸದೇ ತಮ್ಮ ಸ್ವಂತ ವ್ಯವಹಾರ ನೋಡಿಕೊಳ್ಳಬೇಕೆಂದು ವಿಡಿಯೋ ಪೋಸ್ಟ್ ಮಾಡಿದವರಿಗೆ ತರಾಟೆಗೆ ತೆಗೆದುಕೊಳ್ಳಲಾಗಿದೆ.

https://twitter.com/IndiaToday/status/1744934090300887307

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read