ನ. 5ರಂದು ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ಲಿಖಿತ ಪರೀಕ್ಷೆ: ಅಭ್ಯರ್ಥಿಗಳಿಗೆ ಈ ನಿಯಮ ಪಾಲನೆ ಕಡ್ಡಾಯ

ಬೆಂಗಳೂರು : 2022-23ನೇ ಸಾಲಿನ ಪೊಲೀಸ್ ಕಾನ್ಸ್‍ಟೇಬಲ್ (ಸಿವಿಲ್)-454 ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳಿಗೆ 2023ರ ನವಂಬರ್ 5ರಂದು ಭಾನುವಾರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 12.30 ರವರೆಗೆ ಲಿಖಿತ ಪರೀಕ್ಷೆ ನಡೆಲಿದೆ.

ಲಿಖಿತ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಯಾವುದೇ ರೀತಿಯ ಪುಸ್ತಕ, ಕೈಬರಹ ಚೀಟಿ, ಪೇಜರ್, ಕ್ಯಾಲ್ಕುಲೇಟರ್, ಇಯರ್ ಫೋನ್, ಮೊಬೈಲ್ ಪೋನ್‍ಗಳನ್ನು ಪರೀಕ್ಷೆಗೆ ತರದಂತೆ ನಿಷೇಧಿಸಲಾಗಿದೆ. ಅಭ್ಯರ್ಥಿಗಳು ಬೆಲೆ ಬಾಳುವ ವಸ್ತು ಸಾಮಾಗ್ರಿಗಳನ್ನು ತರದಂತೆ ತಿಳಿಸಲಾಗಿದೆ. ತಮ್ಮ  ವಸ್ತುಗಳಿಗೆ ತಾವೇ ಜವಾಬ್ದಾರರಾಗಿರುತ್ತೀರಿ. ಅಭ್ಯರ್ಥಿಗಳಿಗೆ ಕರೆಪತ್ರದ ಬಗ್ಗೆ ಮುಂಬರುವ ದಿನಗಳಲ್ಲಿ ಎಸ್‍ಎಂಎಸ್ ಮೂಲಕ ಮಾಹಿತಿ ನೀಡಲಾಗುವುದು ಹಾಗೂ ಕರೆಪತ್ರದ ಲಿಂಕ್‍ಅನ್ನು ಸಹ ಕಳುಹಿಸಲಾಗುವುದು.

 ಅಭ್ಯರ್ಥಿಗಳು ಕರೆ ಪತ್ರವನ್ನು ಡೌನ್‍ಲೋಡ್ ಮಾಡಿಕೊಂಡು ನಿಗಧಿಪಡಿಸಿದ ದಿನಾಂಕದಂದು ಲಿಖಿತ ಪರೀಕ್ಷೆ ಹಾಜರಾಗಲು ಸೂಚಿಸಿದೆ ಹಾಗೂ ಕರೆ ಪತ್ರದಲ್ಲಿ ನಮೂದಿಸಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read