ದೇಶಕ್ಕೆ ಗೌರವ ತಂದು ಕೊಟ್ಟವರಿಗೆ ಸಿಗುವ ಗೌರವ ಇದೇನಾ?: ಕುಸ್ತಿಪಟುಗಳ ಮೇಲಿನ ದೌರ್ಜನ್ಯ ಖಂಡಿಸಿದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ

ನವದೆಹಲಿ: ಕುಸ್ತಿಗೆ ಪಟುಗಳ ಪರ ನಿಂತ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ಕುಸ್ತಿಪಟುಗಳಿಗೆ ನ್ಯಾಯ ಸಿಗುವ ಭರವಸೆ ಇದೆ. ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಹೇಳಿದ್ದಾರೆ.

ಕುಸ್ತಿಪಟುಗಳ ಮೇಲಿನ ದೌರ್ಜನ್ಯವನ್ನು ಅನಿಲ್ ಕುಂಬ್ಳೆ ಖಂಡಿಸಿದ್ದಾರೆ. ಮೇ 28 ರಂದು ದೆಹಲಿಯಲ್ಲಿ ನಡೆದ ಘಟನೆ ಅಮಾನವೀಯ. ದೇಶಕ್ಕೆ ಗೌರವ ತಂದು ಕೊಟ್ಟವರಿಗೆ ಸಿಗುವ ಗೌರವ ಇದೇನಾ ಎಂದು ಪ್ರಶ್ನಿಸಿದ್ದಾರೆ.

ಅನಿಲ್ ಕುಂಬ್ಳೆ ಅವರು ಕುಸ್ತಿಪಟುಗಳ ಮೇಲಿನ ದೌರ್ಜನಕ್ಕೆ ಬೇಸರ ವ್ಯಕ್ತಪಡಿಸಿ ಕುಸ್ತಿಪಟುಗಳಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

ನೀರಜ್ ಚೋಪ್ರಾ, ಅಭಿನವ್ ಬಿಂದ್ರಾ, ಸುನೀಲ್ ಛೆಟ್ರಿ ಮುಂತಾದ ಕ್ರೀಡಾಪಟುಗಳು ಕುಸ್ತಿಪಟುಗಳಿಗೆ ಬೆಂಬಲ ಸೂಚಿಸಿದ್ದು, ಅವರೊಂದಿಗೆ ಅನಿಲ್ ಕುಂಬ್ಳೆ ಸೇರಿಕೊಂಡಿದ್ದಾರೆ.

https://twitter.com/anilkumble1074/status/1663519887883370497

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read