ಲಖ್ನೋದಲ್ಲಿನ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನ ಕ್ರಿಕೆಟ್ ಕ್ರೀಡಾಂಗಣದಲ್ಲಿ ಗುರುವಾರ ಯುಪಿ ವಾರಿಯರ್ಜ್ ವಿರುದ್ಧದ ಪಂದ್ಯದ ವೇಳೆ WPL ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಮುಂಬೈ ಇಂಡಿಯನ್ಸ್ ನಾಯಕಿ ಹರ್ಮನ್‌ಪ್ರೀತ್ ಕೌರ್‌ಗೆ ಅವರ ಪಂದ್ಯದ ಶುಲ್ಕದ 10 ಪ್ರತಿಶತವನ್ನು ದಂಡ ವಿಧಿಸಲಾಗಿದೆ.
ಪಂದ್ಯದ ಸಮಯದಲ್ಲಿ ಅಂಪೈರ್ ತೀರ್ಪಿಗೆ ಅಸಮ್ಮತಿ ತೋರಿಸುವ ಆರ್ಟಿಕಲ್ 2.8 ರ ಅಡಿಯಲ್ಲಿನ ಲೆವೆಲ್ 1 ಅಪರಾಧವನ್ನು ಹರ್ಮನ್‌ಪ್ರೀತ್ ಒಪ್ಪಿಕೊಂಡಿದ್ದಾರೆ ಎಂದು WPL ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಅಂತಿಮ ಓವರ್‌ನಲ್ಲಿ ಆನ್-ಫೀಲ್ಡ್ ಅಂಪೈರ್ ನಿಧಾನಗತಿಯ ಓವರ್ ರೇಟ್‌ಗಾಗಿ MI ಗೆ ದಂಡ ವಿಧಿಸಿದಾಗ ಈ ಘಟನೆ ಸಂಭವಿಸಿದೆ. ನಿಯಮದ ಪ್ರಕಾರ ಫೀಲ್ಡಿಂಗ್ ನಿರ್ಬಂಧಗಳನ್ನು ಜಾರಿಗೊಳಿಸಿದರು. ಇದು MI 30-ಯಾರ್ಡ್ ವೃತ್ತದ ಹೊರಗೆ ಕೇವಲ ಮೂವರು ಫೀಲ್ಡರ್‌ಗಳನ್ನು ಹೊಂದಿರಬೇಕಾಯಿತು.
MI ನಾಯಕಿ ಹರ್ಮನ್‌ಪ್ರೀತ್ ಈ ನಿರ್ಧಾರದಿಂದ ಅಸಮಾಧಾನಗೊಂಡು ಸವಾಲು ಹಾಕಲು ಅಂಪೈರ್ ಅಜಿತೇಶ್ ಅರ್ಗಾಲ್ ಅವರನ್ನು ಎದುರಿಸಿದ್ದಾರೆ.
ಏತನ್ಮಧ್ಯೆ, ಅಂತಿಮ ಓವರ್ ಬೌಲ್ ಮಾಡಲು ಸಿದ್ಧರಾಗಿದ್ದ ಆಲ್ ರೌಂಡರ್ ಅಮೆಲಿಯಾ ಕೆರ್ ಕೂಡ ನಿರ್ಧಾರದಿಂದ ಅಸಮಾಧಾನಗೊಂಡರು.
ಪರಿಸ್ಥಿತಿ ತಿರುವು ಪಡೆಯುತ್ತಿದ್ದಂತೆ, ನಾನ್-ಸ್ಟ್ರೈಕರ್ ತುದಿಯಲ್ಲಿ ನಿಂತಿದ್ದ ಇಂಗ್ಲೆಂಡ್ ಕ್ರಿಕೆಟಿಗ ಸೋಫಿ ಎಕ್ಲೆಸ್ಟೋನ್ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅಂಪೈರ್ ಅನ್ನು ಸಮೀಪಿಸಿದರು. ಇದು ಹರ್ಮನ್‌ಪ್ರೀತ್ ಮತ್ತು ಎಕ್ಲೆಸ್ಟೋನ್ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು. ಈ ಸಮಯದಲ್ಲಿ MI ನಾಯಕಿ ಆಕೆಯತ್ತ ಬೆರಳು ತೋರಿಸುತ್ತಿರುವುದು ಕಂಡುಬಂದಿದೆ.
ಪರಿಸ್ಥಿತಿಯನ್ನು ತಿಳಿಗೊಳಿಸಲು ಅಂಪೈರ್‌ಗಳು ತ್ವರಿತವಾಗಿ ಮಧ್ಯಪ್ರವೇಶಿಸಿದ್ದು, ಎಕ್ಲೆಸ್ಟೋನ್ ನಿರಾಶೆಗೊಂಡಂತೆ ನಾನ್-ಸ್ಟ್ರೈಕರ್ ತುದಿಗೆ ಮರಳಿದರು.
ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೀತಿ ಸಂಹಿತೆಯ ಲೆವೆಲ್ 1 ಉಲ್ಲಂಘನೆಗಳಿಗೆ, ಪಂದ್ಯದ ರೆಫರಿಯ ನಿರ್ಧಾರವು ಅಂತಿಮ ಮತ್ತು ಬದ್ಧವಾಗಿರುತ್ತದೆ.
ಪಂದ್ಯಕ್ಕೆ ಬಂದರೆ, ಅಮೆಲಿಯಾ ಕೆರ್ ಅವರ ಐದು ವಿಕೆಟ್ ಸಾಧನೆ (5-38), ನಂತರ ಹೇಲಿ ಮ್ಯಾಥ್ಯೂಸ್ ಅವರ ಭರ್ಜರಿ ಅರ್ಧಶತಕ (46 ಎಸೆತಗಳಲ್ಲಿ 68) ಮುಂಬೈಗೆ ಆರು ವಿಕೆಟ್‌ಗಳ ಜಯವನ್ನು ತಂದುಕೊಟ್ಟಿತು.
ಪ್ರಸ್ತುತ ಪರ್ಪಲ್ ಕ್ಯಾಪ್ ಹೊಂದಿರುವ ಕೆರ್ ಈ ಋತುವಿನಲ್ಲಿ ಐದು ವಿಕೆಟ್ ಪಡೆದ ಮೊದಲ ಬೌಲರ್ ಎನಿಸಿಕೊಂಡರು. WPL ಇತಿಹಾಸದಲ್ಲಿ MI ಆಟಗಾರನ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳನ್ನು ದಾಖಲಿಸಿದರು.