ಅಮೆರಿಕನ್ನರು ಬಟ್ಟೆ ಒಣಗಿಸುವ ರೀತಿಗೆ ಬಂದ್ವು ಇಂಟ್ರೆಸ್ಟಿಂಗ್ ಕಮೆಂಟ್ಸ್….!

ಭಾರತೀಯರು ತೆರೆದ ಅಂಗಳ ಮತ್ತು ಬಾಲ್ಕನಿಗಳಲ್ಲಿ ಹಗ್ಗ/ ತಂತಿ ಮೇಲೆ ಬಟ್ಟೆಗಳನ್ನು ಹಾಕಿ ಅವುಗಳನ್ನು ಒಣಗಿಸುತ್ತಾರೆ. ಇಂತಹ ವಿಧಾನವೇನೂ ಇಲ್ಲಿ ವಿಶೇಷವೆನಿಸಲ್ಲ. ಆದರೆ ಪಾಶ್ಚಿಮಾತ್ಯ ದೇಶಗಳಲ್ಲಿ ಇಂತಹ ದೃಶ್ಯ ಕಂಡುಬರುವುದಿಲ್ಲ. ಆದರೆ ಅಮೆರಿಕನ್ನರು ಬಟ್ಟೆ ಒಣಗಿಸಲೆಂದೇ ಹಗ್ಗ ಕಟ್ಟಿ ಅದರ ಮೇಲೆ ಬಟ್ಟೆ ಒಣಗಿಸುವುದನ್ನು ಕಂಡುಹಿಡಿದಿದ್ದಾರೆಂದು ಹೇಳಲಾದ ಹಳೆಯ ಪೋಸ್ಟ್ ವೈರಲ್ ಆಗುತ್ತಿದೆ.

ಥಾಮಸ್ ವೈಲೆಸ್ಸ್ ಎಂಬ ಖಾತೆಯಿಂದ ಹಳೆಯ ರೆಡ್ಡಿಟ್ ಪೋಸ್ಟ್ ಅನ್ನು ಪುನಃ ಪೋಸ್ಟ್ ಮಾಡಲಾಗಿದೆ. “ಒಣಗಲು ಬಟ್ಟೆಗಳನ್ನು ನೇತುಹಾಕುವುದು. ವಿದ್ಯುತ್ ಬಿಲ್‌ಗಳಲ್ಲಿ ವರ್ಷಕ್ಕೆ ನೂರು ಅಥವಾ ಹೆಚ್ಚಿನದನ್ನು ಉಳಿಸಿ.” ಎಂದು ಪೋಸ್ಟ್ ಗೆ ಶೀರ್ಷಿಕೆ ನೀಡಿದ್ದಾರೆ. ಇದು ಪಾಶ್ಚಿಮಾತ್ಯ ದೇಶಗಳ ನಿವಾಸಿಗರ ಗಮನ ಸೆಳೆದಿದ್ದು, ನಾನು ಅಮೆರಿಕನ್ನರನ್ನು ತುಂಬಾ ಪ್ರೀತಿಸುತ್ತೇನೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಹೆಚ್ಚಿನ ಟೀಕೆಗಳು ಉಲ್ಲಾಸದಾಯಕವಾಗಿದ್ದು ಪಾಶ್ಚಿಮಾತ್ಯರನ್ನು ಗೇಲಿ ಮಾಡುವಂತಿವೆ. “ಅಮೆರಿಕನ್ನರು ಬಟ್ಟೆ ಒಣಗಿಸುವ ಬಗ್ಗೆ ಕಲಿತರೆ ನಾವು ಹವಾಮಾನ ಬದಲಾವಣೆಯನ್ನು ಪರಿಹರಿಸಬಹುದು.” ಎಂದಿದ್ದಾರೆ. “ವಾವ್, ಇದು ಹೊಸ ತಂತ್ರಜ್ಞಾನ” ಎಂದು ಕೆಲವರು ಬರೆದಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read