ಜಗತ್ತಿನ ಅತ್ಯಂತ ಹಳೆಯ ಯಾಂತ್ರಿಕೃತ ಮುದ್ರಿತ ಪುಸ್ತಕಗಳ ಪ್ರದರ್ಶನ ಆಯೋಜಿಸಿದ ಪ್ಯಾರಿಸ್

ಯೂರೋಪ್‌ನಲ್ಲಿ ಮೊದಲ ಬಾರಿಗೆ ಯಾಂತ್ರಿಕವಾಗಿ ಮುದ್ರಣಗೊಂಡ ದಾಖಲೆಗಿಂತ 50 ವರ್ಷಗಳ ಮುಂಚೆಯೇ ಬಿಡುಗಡೆಯಾಗಿದ್ದ ಕೊರಿಯನ್ ಪುಸ್ತಕವೊಂದನ್ನು ಪ್ಯಾರಿಸ್‌ನಲ್ಲಿ ಪ್ರದರ್ಶಿಸಲಾಗಿದೆ. ’ಜಿಕ್ಜಿ’ ಹೆಸರಿನ ಈ ಪುಸ್ತಕ ಬೌದ್ಧ ಪ್ರವಚನಗಳನ್ನು ಒಳಗೊಂಡಿದ್ದು, 1377ರಲ್ಲಿ ಮುದ್ರಿತವಾಗಿದೆ.

ಜೊಹಾನ್ಸೆಸ್ ಗುಟೆನ್‌ಬರ್ಗ್ ಬೈಬಲ್‌ನ ಮುದ್ರಿತ ಅವತರಣಿಕೆ ತರುವ 78 ವರ್ಷಗಳ ಮುಂಚಿನ ಪುಸ್ತಕ ’ಜಿಕ್ಜಿ’ ಆಗಿದೆ. ಫ್ರಾನ್ಸ್‌ನ ರಾಷ್ಟ್ರೀಯ ಗ್ರಂಥಾಲಯದಲ್ಲಿ ಈ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ಜಿಕ್ಜಿಯನ್ನು ವಿಕ್ಟರ್‌ ಕಾಲಿನ್ ಡೆ ಪ್ರಾನ್ಸಿ ಹೆಸರಿನ ವ್ಯಕ್ತಿಯೊಬ್ಬರು 1887ರಲ್ಲಿ ಮೊದಲ ಬಾರಿಗೆ ಫ್ರಾನ್ಸ್‌ಗೆ ತಂದಿದ್ದರು. ಇವರು ಆ ಕಾಲದಲ್ಲಿ ಕೊರಿಯಾಗೆ ಫ್ರಾನ್ಸ್ ರಾಯಭಾರಿಯಾಗಿ ತೆರಳಿದ್ದರು.

ಈ ಪುಸ್ತಕವು 1371-1378ರ ನಡುವಿನ ಕಾಲಘಟ್ಟದ್ದು ಎಂದು ತಿಳಿದುಬಂದಿದೆ.

ಪ್ರದರ್ಶನದ ವೇಳೆ, ಜಗತ್ತಿನ ಮೂಲೆ ಮೂಲೆಗಳಿಂದ ಸಂಗ್ರಹಿಸಲಾದ ಮಧ್ಯಪ್ರಾಚ್ಯ ಕಾಲಘಟ್ಟದ ಅನೇಕ ಮುದ್ರಣಗಳನ್ನು ಇರಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read