ಚೀನಾದಲ್ಲಿ ಸಂಭವಿಸಿತ್ತು ಅತಿ ಉದ್ದದ ಟ್ರಾಫಿಕ್ ಜಾಮ್; 12 ದಿನಗಳ ಕಾಲ ರಸ್ತೆಯಲ್ಲೇ ಇದ್ದರು ವಾಹನ ಸವಾರರು…!

ಬಹುತೇಕ ಎಲ್ಲರೂ ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿಹಾಕಿಕೊಂಡು ಗಂಟೆಗಟ್ಟಲೆ ಕಾಲ ಕಳೆದ ಅನುಭವ ಹೊಂದಿರುತ್ತಾರೆ. ಆದರೆ, 12 ದಿನಗಳ ಕಾಲ ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿಹಾಕಿಕೊಂಡರೆ ಹೇಗಿರುತ್ತಿತ್ತು ಎಂದು ಊಹಿಸಿಕೊಳ್ಳಿ.

2010ರ ಆಗಸ್ಟ್ 14ರಂದು ಚೀನಾದ ಬೀಜಿಂಗ್-ತಿಬೆಟ್ ಎಕ್ಸ್‌ಪ್ರೆಸ್‌ವೇನಲ್ಲಿ (ಚೀನಾ ರಾಷ್ಟ್ರೀಯ ಹೆದ್ದಾರಿ 110) ವಿಶ್ವದ ಅತಿ ಉದ್ದದ ಟ್ರಾಫಿಕ್ ಜಾಮ್ ಸಂಭವಿಸಿತ್ತು. 100 ಕಿಲೋಮೀಟರ್ ವರೆಗೆ ವಾಹನಗಳು ಸರತಿ ಸಾಲಿನಲ್ಲಿ ನಿಂತಿದ್ದವು. 12 ದಿನಗಳ ಕಾಲ ಜನರು ತಮ್ಮ ವಾಹನಗಳಲ್ಲೇ ಸಿಕ್ಕಿಹಾಕಿಕೊಂಡಿದ್ದರು. ಇದು ಇತಿಹಾಸದಲ್ಲಿ ದಾಖಲಾದ ಅತಿ ಉದ್ದದ ಟ್ರಾಫಿಕ್ ಜಾಮ್ ಆಗಿದೆ.

ಈ ಜಾಮ್‌ಗೆ ಕಾರಣ ಮಂಗೋಲಿಯಾದಿಂದ ಬೀಜಿಂಗ್‌ಗೆ ಸಾಗಿಸಲಾಗುತ್ತಿದ್ದ ಕಲ್ಲಿದ್ದಲು ಮತ್ತು ನಿರ್ಮಾಣ ಸಾಮಗ್ರಿಗಳ ಟ್ರಕ್‌ಗಳು. ಬೀಜಿಂಗ್‌ನಿಂದ ಹೊರಹೋಗುವ ಮಾರ್ಗವನ್ನು ಈ ಟ್ರಕ್‌ಗಳು ತಡೆದು ನಿಲ್ಲಿಸಿದ್ದವು. ಇದನ್ನು ತೆರವುಗೊಳಿಸಲು ಆಡಳಿತಕ್ಕೆ 12 ದಿನಗಳ ಕಾಲ ಬೇಕಾಯಿತು.

ಈ ಜಾಮ್‌ನಲ್ಲಿ ಸಿಲುಕಿದ ಜನರು ತಮ್ಮ ವಾಹನಗಳಲ್ಲೇ ಊಟ ಮಾಡಿ, ನಿದ್ರೆ ಮಾಡಬೇಕಾಯಿತು. ರಸ್ತೆಯ ಬದಿಯಲ್ಲಿ ತಾತ್ಕಾಲಿಕ ಮನೆಗಳನ್ನು ನಿರ್ಮಿಸಲಾಗಿತ್ತು. ಆಹಾರ ಪದಾರ್ಥಗಳ ಬೆಲೆ ನಾಲ್ಕು ಪಟ್ಟು ಹೆಚ್ಚಾಗಿತ್ತು.

ಈ ಘಟನೆ ಎಲ್ಲರಿಗೂ ಎಚ್ಚರಿಕೆಯ ಸಂಕೇತವಾಗಿದೆ. ಯಾವುದೇ ಅನಿರೀಕ್ಷಿತ ಘಟನೆ ಸಂಭವಿಸಿದರೂ ಸಹ, ಸಂಯಮದಿಂದ ವರ್ತಿಸುವುದು ಮುಖ್ಯ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read