ತಲೆ ಕಸಿ ಮಾಡುವ ಆಘಾತಕಾರಿ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಎಂಟು ನಿಮಿಷಗಳಿಗಿಂತ ಹೆಚ್ಚು ಅವಧಿಯ ಈ ಅನಿಮೇಟೆಡ್ ವೀಡಿಯೊದಲ್ಲಿ, ಎರಡು ವಿಭಿನ್ನ ರೋಬೋಟ್ ಶಸ್ತ್ರಚಿಕಿತ್ಸಕರು ಎರಡು ದೇಹಗಳ ಮೇಲೆ ಏಕಕಾಲದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ರೋಬೋಟ್‌ಗಳು ಒಂದು ದೇಹದಿಂದ ತಲೆಯನ್ನು ತೆಗೆದು ಇನ್ನೊಂದು ದೇಹಕ್ಕೆ ಹೇಗೆ ಜೋಡಿಸುತ್ತವೆ ಎಂಬುದನ್ನು ವೀಡಿಯೊದಲ್ಲಿ ತೋರಿಸಲಾಗಿದೆ.
ವಿಶ್ವದ ಮೊದಲ ತಲೆ ಕಸಿ ತಂತ್ರಜ್ಞಾನ, 4 ನೇ ಹಂತದ ಕ್ಯಾನ್ಸರ್ ಮತ್ತು ಗಂಭೀರ ಮೆದುಳಿನ ಕಾಯಿಲೆಗಳೊಂದಿಗೆ ಹೋರಾಡುವ ಜನರಿಗೆ ಆಶಾದಾಯಕವಾಗಿದೆ ಎಂದು ಇದರಲ್ಲಿ ಬರೆಯಲಾಗಿದೆ. ಅಮೆರಿಕದ ನರವಿಜ್ಞಾನ ಮತ್ತು ಬಯೋಮೆಡಿಕಲ್ ಎಂಜಿನಿಯರಿಂಗ್ ಕಂಪನಿ ಬ್ರೈನ್‌ಬ್ರಿಡ್ಜ್ ತಲೆ ಕಸಿ ಮಾಡುವ ಹೊಸ ತಂತ್ರಜ್ಞಾನವನ್ನು ಪರಿಚಯಿಸಿದೆ. ಈ ತಂತ್ರಜ್ಞಾನದಲ್ಲಿ ಮೆದುಳು ಸತ್ತ ದಾನಿಯ ದೇಹಕ್ಕೆ ರೋಗಿಯ ತಲೆಯನ್ನು ಕಸಿ ಮಾಡಲಾಗುತ್ತದೆ.
ಬ್ರೈನ್‌ಬ್ರಿಡ್ಜ್, ನಾಲ್ಕನೇ ಹಂತದ ಕ್ಯಾನ್ಸರ್, ಪಾರ್ಶ್ವವಾಯು, ಅಲ್ಝೈಮರ್ ಮತ್ತು ಪಾರ್ಕಿನ್ಸನ್‌ನಂತಹ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಆಶಾದಾಯಕಾವಿದೆ. ಇದು ರೋಗಿಯ ಪ್ರಜ್ಞೆ, ನೆನಪುಗಳು ಮತ್ತು ಆಲೋಚನಾ ಶಕ್ತಿಯನ್ನು ಉಳಿಸಬಹುದು ಎಂದು ಹೇಳಲಾಗ್ತಿದೆ. ಆನ್‌ಲೈನ್‌ನಲ್ಲಿ ಈ ವಿಡಿಯೋ ವೈರಲ್ ಆಗಿದ್ದು ಸುಮಾರು 50 ಲಕ್ಷ ಜನರು ಇದನ್ನು ವೀಕ್ಷಿಸಿದ್ದಾರೆ. ಈ ಪ್ರಕ್ರಿಯೆ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ.
https://twitter.com/TansuYegen/status/1793045981954523464?ref_src=twsrc%5Etfw%7Ctwcamp%5Etweetembed%7Ctwterm%5E1793045981954523464%7Ctwgr%5Eaf95648d10ae7c85ea176eaece733640d611b20f%7Ctwcon%5Es1_&ref_url=https%3A%2F%2Fzeenews.india.com%2Fhindi%2Foff-beat%2Fworld-first-head-transplant-system-robot-demo-video-viral%2F2259804