BIG NEWS : ಜಗತ್ತಿನ ಮೊದಲ ‘ಎಲೆಕ್ಟ್ರಿಕ್ ವಿಮಾನ ಹಾರಾಟ’ ಯಶಸ್ವಿ : 130 ಕಿ.ಮೀಗೆ ಜಸ್ಟ್​ 700 ರೂ. |WATCH VIDEO

ಡಿಜಿಟಲ್ ಡೆಸ್ಕ್ : ಈಗಾಗಲೇ ಎಲೆಕ್ಟ್ರಿಕ್ ಬೈಕ್, ಕಾರು, ಬಸ್ಗಳೆಲ್ಲ ಬಂದಿವೆ. ಇದೀಗ ಎಲೆಕ್ಟ್ರಿಕ್ ವಿಮಾನ ಕೂಡ ಬಂದಿದೆ. ಹೌದು , ಜಗತ್ತಿನ ಮೊದಲ ಎಲೆಕ್ಟ್ರಿಕ್ ವಿಮಾನ ಹಾರಾಟ ಯಶಸ್ವಿಯಾಗಿದ್ದು, ಭಾರತೀಯರ ಕನಸು ನನಸಾಗಿದೆ . ಇನ್ಮುಂದೆ ಅಗ್ಗದ ದರದಲ್ಲಿ ನೀವು ವಿಮಾನದಲ್ಲಿ ಹಾರಾಡಬಹುದು.

ಹೌದು. ಬೀಟಾ ಟೆಕ್ನಾಲಜೀಸ್ನ ಅಲಿಯಾ CX300 ಎಂಬ ವಿಮಾನ ಪ್ರಯಾಣಿಕರನ್ನು ಹೊತ್ತು ಹಾರಾಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಈಸ್ಟ್ ಹ್ಯಾಂಪ್ಟನ್ನಿಂದ ಅಮೆರಿಕದ ಜಾನ್ ಎಫ್. ಕೆನಡಿ ವಿಮಾನ ನಿಲ್ದಾಣಕ್ಕೆ ನಾಲ್ವರು ಪ್ರಯಾಣಿಕರೊಂದಿಗೆ ಹಾರಿದ ವಿಮಾನವು ಕೇವಲ 30 ನಿಮಿಷಗಳಲ್ಲಿ ಸುಮಾರು 70 ನಾಟಿಕಲ್ ಮೈಲುಗಳನ್ನು (130 ಕಿಲೋಮೀಟರ್) ಕ್ರಮಿಸಿತು ಎಂದು ವರದಿಯೊಂದು ತಿಳಿಸಿದೆ.

ಹೆಲಿಕಾಪ್ಟರ್ 130 ಕಿ.ಮೀವರೆಗೆ ಪ್ರಯಾಣ ಬೆಳೆಸಲು ಸುಮಾರು 13,885 ರೂಪಾಯಿಯಷ್ಟು ಇಂಧನವನ್ನು ದಹಿಸುತ್ತದೆ. ಆದರೆ ಈ ಎಲೆಕ್ಟ್ರಿಕ್ ವಿಮಾನದಲ್ಲಿ ಪ್ರಯಾಣ ಮಾಡಬೇಕು ಎಂದರೆ ಜಸ್ಟ್ 694 ರೂಪಾಯಿ ಪಾವತಿ ಮಾಡಿದರೆ ಸಾಕು. ಹಾಗೂ ಎಲೆಕ್ಟ್ರಿಕ್ ವಿಮಾನದಲ್ಲಿ ಯಾವುದೇ ಶಬ್ಧ ಬರುವುದಿಲ್ಲದ ಕಾರಣ ಪ್ರಯಾಣಿಕರು ಸ್ಪಷ್ಟವಾಗಿ ಮಾತಾಡಬಹುದು.

ನ್ಯೂಯಾರ್ಕ್ನಲ್ಲಿ ಇದು ಮೊದಲ ವಿದ್ಯುತ್ ಚಾಲಿತ ವಿಮಾನವಾಗಿದೆ. ಕೇವಲ 30 ನಿಮಿಷದಲ್ಲಿ 130 ಕಿಲೋ ಮೀಟರ್ ದೂರ ಪ್ರಯಾಣ ಮಾಡಿದೆ ಎಂದು ಬೀಟಾ ಟೆಕ್ನಾಲಜೀಸ್ ಕಂಪನಿಯ ಸಿಇಒ ಕೈಲ್ ಕ್ಲಾರ್ಕ್ ತಿಳಿಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read