ವಿಶ್ವದ ಮೊದಲ CNG-ಚಾಲಿತ ಬೈಕ್‌;‌ ಇಲ್ಲಿದೆ ಬಜಾಜ್‌ ಫ್ರೀಡಮ್ 125 ನ ವಿಶೇಷತೆ ಮತ್ತು ಬೆಲೆ ವಿವರ

ವಿಶ್ವದ ಮೊದಲ CNG-ಚಾಲಿತ ಮೋಟಾರ್‌ಬೈಕ್ ಅನ್ನು ಬಜಾಜ್ ಆಟೋ ಕಂಪನಿ ಬಿಡುಗಡೆ ಮಾಡಿದೆ. ಇದಕ್ಕೆ ಬಜಾಜ್ ಫ್ರೀಡಮ್ 125 ಎಂದು ಹೆಸರಿಸಲಾಗಿದೆ. ಈ ಬೈಕ್ ಪೆಟ್ರೋಲ್‌ನಲ್ಲಿ ಕೂಡ ಚಲಿಸುತ್ತದೆ, ಒಂದು ಬಟನ್‌ ಅದುಮುವ ಮೂಲಕ ಅದನ್ನು ಸಿಎನ್‌ಜಿಗೆ ಬದಲಾಯಿಸಬಹುದು. ಸಿಎನ್‌ಜಿ ಚಾಲಿತ ಕಾರುಗಳು ಅಸ್ತಿತ್ವಕ್ಕೆ ಬಂದು ದಶಕಗಳೇ ಕಳೆದಿವೆ. ಆದರೆ ಈವರೆಗೂ ಸಿಎನ್‌ಜಿ ಚಾಲಿತ ಮೋಟಾರ್‌ಬೈಕ್‌ ಭಾರತದಲ್ಲಿ ಇರಲಿಲ್ಲ.

ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿ ಈ ತಂತ್ರಜ್ಞಾನವನ್ನು ಬಳಸಿರುವ ಮೊದಲ ಮೋಟಾರ್‌ಸೈಕಲ್ ಇದಾಗಿದೆ. ಈ ಬೈಕ್‌ನ ಬೆಲೆ 95,000 ರೂಪಾಯಿ. ಕಂಪನಿಯ ಅಧಿಕೃತ ವೆಬ್‌ಸೈಟ್ ಮತ್ತು ಅಧಿಕೃತ ಶೋರೂಂಗಳ ಮೂಲಕ ಆಸಕ್ತರು ಬುಕ್ಕಿಂಗ್‌ ಮಾಡಬಹುದು. ಫ್ರೀಡಂ 125 ಅನ್ನು ಮೂರು ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ: NG04 ಡಿಸ್ಕ್ LED, NG04 ಡ್ರಮ್ LED ಮತ್ತು NG04 ಡ್ರಮ್. ಎಲ್ಇಡಿ ರೂಪಾಂತರಗಳು ಐದು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿವೆ. ಎಲ್ಇಡಿ ಅಲ್ಲದ ಡ್ರಮ್ ರೂಪಾಂತರವು ಎರಡು ಬಣ್ಣಗಳಲ್ಲಿ ಲಭ್ಯವಿದೆ.

ಬೆಲೆ…

NG04 ಡಿಸ್ಕ್ LED: 1,10,000 ರೂ.

NG04 ಡ್ರಮ್ LED: 1,05,000 ರೂ.

NG04 ಡ್ರಮ್: 95,000 ರೂ.

ಬಜಾಜ್ ಫ್ರೀಡಂ 125 ದ್ವಿಚಕ್ರ ವಾಹನ ಮಾರುಕಟ್ಟೆಯ ಮೇಲೆ ಗಮನಾರ್ಹವಾಗಿ ಪ್ರಭಾವ ಬೀರಬಹುದು. CNG ತಂತ್ರಜ್ಞಾನವು ಇಂಧನ ವೆಚ್ಚವನ್ನು ಕಡಿಮೆ ಮಾಡುತ್ತದೆ. ಪರಿಸರಕ್ಕೂ ಇದು ಮಾರಕವಲ್ಲ. ಇವೆರಡೂ ಭಾರತೀಯ ದ್ವಿಚಕ್ರ ವಾಹನ ಮಾಲೀಕರಿಗೆ ನಿರ್ಣಾಯಕ ಅಂಶಗಳಾಗಿವೆ.

ಈ ಬೈಕ್‌ ಕೇವಲ ಎರಡು ಲೀಟರ್‌ ಸಾಮರ್ಥ್ಯದ ಪುಟ್ಟ ಪೆಟ್ರೋಲ್ ಟ್ಯಾಂಕ್ ಹೊಂದಿದೆ. ಇದು ಪ್ರತಿ ಕಿಲೋ ಸಿಎನ್‌ಜಿಗೆ 213 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಬೈಕ್‌ ಬಿಡುಗಡೆಗೂ ಮುನ್ನ 11 ಸುರಕ್ಷತಾ ಪರೀಕ್ಷೆಗಳಿಗೆ ಒಳಗಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read