ಭಾರತದ ಈ ನಗರದಲ್ಲಿ ಮಾಂಸಾಹಾರ ನಿಷೇಧ; ಇದರ ಹಿಂದಿದೆ ಒಂದು ಕಾರಣ….!

ಮಾಂಸಾಹಾರವನ್ನು ಸೇವಿಸುವುದು ಮತ್ತು ಮಾರಾಟ ಮಾಡುವುದನ್ನು ಕಾನೂನುಬದ್ಧವಾಗಿ ನಿಷೇಧಿಸಿರುವ ವಿಶ್ವದ ಮೊದಲ ನಗರ ಪಾಲಿತಾನಾ. ಗುಜರಾತ್ ರಾಜ್ಯದ ಭಾವನಗರ ಜಿಲ್ಲೆಯಲ್ಲಿರುವ ಈ ನಗರವು ಜೈನ ಧರ್ಮೀಯರ ಪ್ರಮುಖ ಯಾತ್ರಾ ಸ್ಥಳವಾಗಿದೆ.

ಸುಮಾರು 200 ಜೈನ ಸನ್ಯಾಸಿಗಳು ನಗರದಲ್ಲಿರುವ ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ಆಗ್ರಹಿಸಿದ್ದರಿಂದ ಬಹಳ ಹಿಂದೆಯೇ ಈ ನಿರ್ಧಾರ ತೆಗೆದುಕೊಳ್ಳಲಾಯಿತು. ಪ್ರಾಣಿಹತ್ಯೆಯನ್ನು ತಡೆಯುವುದು ಮತ್ತು ಮಾಂಸ ಸೇವನೆಯನ್ನು ನಿಷೇಧಿಸುವುದು ಈ ನಿರ್ಧಾರದ ಮೂಲ ಉದ್ದೇಶವಾಗಿದೆ.

ಪಾಲಿತಾನಾ ಜೈನ ಧರ್ಮೀಯರ ಪ್ರಮುಖ ಯಾತ್ರಾ ಸ್ಥಳವಾಗಿದೆ. ಶತೃಂಜಯ ಬೆಟ್ಟದ ಮೇಲಿರುವ ಅದ್ಭುತವಾದ ದೇವಾಲಯಗಳಿಗೆ ವಿಶ್ವದಾದ್ಯಂತದ ಭಕ್ತರು ಭೇಟಿ ನೀಡುತ್ತಾರೆ. ಅಹಿಂಸೆಯನ್ನು ಒತ್ತಿ ಹೇಳುವ ಈ ನಗರವು ತನ್ನ ಪವಿತ್ರತೆಯನ್ನು ಕಾಪಾಡಿಕೊಂಡಿದೆ.

ಗುಜರಾತ್‌ನಲ್ಲಿ ಮತ್ತು ಜಾಗತಿಕವಾಗಿ ಮಾಂಸಾಹಾರ ವಿರೋಧಿ ಚಳುವಳಿಗಳು ಹೊಸದೇನಲ್ಲ. ಮಹಾತ್ಮಾ ಗಾಂಧಿಯವರು ಶಾಖಾಹಾರದ ಪ್ರಮುಖ ವಕ್ತಾರರಾಗಿದ್ದರು ಮತ್ತು ಅವರ ಪ್ರಭಾವದಿಂದಾಗಿ ಅನೇಕರು ಶಾಖಾಹಾರವನ್ನು ಅನುಸರಿಸುತ್ತಿದ್ದಾರೆ.

ಮಾಂಸಾಹಾರ ನಿಷೇಧದ ನಂತರ ಪಾಲಿತಾನಾದಲ್ಲಿ ಶಾಖಾಹಾರಿ ಭೋಜನಾಲಯಗಳ ಸಂಖ್ಯೆ ಹೆಚ್ಚಾಗಿದೆ. ವಿವಿಧ ರೀತಿಯ ರುಚಿಕರವಾದ ಶಾಖಾಹಾರಿ ಭಕ್ಷ್ಯಗಳನ್ನು ನೀಡುವ ಈ ರೆಸ್ಟೋರೆಂಟ್‌ಗಳು ನಗರದಲ್ಲಿ ವಿಶಿಷ್ಟವಾದ ಅಡುಗೆ ಪದ್ಧತಿಯನ್ನು ರೂಪಿಸಿವೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read