ವಿಶ್ವಕಪ್ ನಲ್ಲಿ ಭಾರತ ಗೆದ್ದರೆ ಉಚಿತ ಬಿಯರ್

ಮೈಸೂರು: ಅಹಮದಾಬಾದ್ ನಲ್ಲಿ ಇಂದು ನಡೆಯಲಿರುವ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಜಯಗಳಿಸಲೆಂದು ಕೋಟ್ಯಂತರ ಮಂದಿ ಪ್ರಾರ್ಥಿಸಿದ್ದಾರೆ.

ಇದೇ ವೇಳೆ ಭಾರತ ತಂಡ ಗೆದ್ದರೆ ಉಚಿತ ಬಿಯರ್ ನೀಡಲು ಮೈಸೂರಿನ ಪೆಗ್ಸ್ & ಕೆಗ್ಸ್ ಪಬ್ ಅಂಡ್ ರೆಸ್ಟೋರೆಂಟ್ ಮುಂದಾಗಿದೆ. ಈ ಮೂಲಕ ಅಭಿಮಾನಿಗಳು ವಿಶೇಷವಾಗಿ ಭಾರತ ತಂಡದ ಗೆಲುವಿನ ಸಂಭ್ರಮಕ್ಕೆ ಮುಂದಾಗಿದ್ದಾರೆ.

ಮೈಸೂರು ವಿಜಯನಗರದ ಹುಣಸೂರು ರಸ್ತೆಯಲ್ಲಿರುವ ಪೆಗ್ಸ್ & ಕೆಗ್ಸ್ ಪಬ್ ಅಂಡ್ ರೆಸ್ಟೋರೆಂಟ್ ನಲ್ಲಿ ಭಾರತ ತಂಡ ಜಯಗಳಿಸಿದರೆ ಒಂದು ಮಗ್ ಉಚಿತ ಬಿಯರ್ ನೀಡುವುದಾಗಿ ಘೋಷಿಸಲಾಗಿದೆ. ಅಲ್ಲದೆ, ಫೈನಲ್ ಪಂದ್ಯ ವೀಕ್ಷಣೆಗೆ ಮೂರು ಬಿಗ್ ಸ್ಕ್ರೀನ್ ವ್ಯವಸ್ಥೆ ಮಾಡಲಾಗಿದೆ. 2011ರ ವಿಶ್ವಕಪ್ ಗೆದ್ದ ತಂಡದ ಸಹಿಯುಳ್ಳ ಬ್ಯಾಟ್, ಧೋನಿ ಕೀಪಿಂಗ್ ಗ್ಲೌಸ್, ರಾಹುಲ್ ದ್ರಾವಿಡ್ ಬ್ಯಾಟಿಂಗ್ ಗ್ಲೌಸ್, ಸಚಿನ್ ತೆಂಡೂಲ್ಕರ್ ಸಹಿ ಇರುವ ಅವರು ಆಡಿದ ಬ್ಯಾಟ್ ಪ್ರದರ್ಶನಕ್ಕೆ ಇಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read