ಫಿಡೆ ವಿಶ್ವಕಪ್ ಚೆಸ್ ಟೂರ್ನಮೆಂಟ್‌ನ ಫೈನಲ್‌ನಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್. ಪ್ರಗ್ನಾನಂದ ವಿರೋಚಿತ ಸೋಲು ಅನುಭವಿಸಿದ್ದಾರೆ.
ಗುರುವಾರ ಬಾಕುವಿನಲ್ಲಿ ನಡೆದ ಟೈ ಬ್ರೇಕರ್ಸ್ನಲ್ಲಿ ವಿಶ್ವದ ನಂ.1 ಮ್ಯಾಗ್ನಸ್ ಕಾರ್ಲ್ಸನ್ ವಿರುದ್ಧ ಆರ್ ಪ್ರಗ್ನಾನಂದ ಅವರು ಸೋತಿದ್ದಾರೆ. ಟೈಬ್ರೇಕರ್ ಎರಡೂ ಪಂದ್ಯಗಳಲ್ಲೂ ಸೋಲಾಗಿದೆ. ನಾರ್ವೆ ದೇಶದ ಮ್ಯಾಗ್ನಸ್ ಕಾರ್ಲ್ಸನ್ ವಿಶ್ವಕಪ್ ಚೆಸ್ ಟೂರ್ನಿ ಗೆದ್ದಿದ್ದಾರೆ.
ಈ ಬಗ್ಗೆ ಅಂತಾರಾಷ್ಟ್ರೀಯ ಚೆಸ್ ಫೆಡರೇಶನ್ ಟ್ವೀಟ್ ಮಾಡಿದ್ದು, “ಪ್ರಗ್ನಾನಂದ 2023 ರ ವಿಶ್ವಕಪ್ ನಲ್ಲಿ ರನ್ನರ್ ಅಪ್ ಆಗಿದ್ದಾರೆ. ಪ್ರಭಾವಶಾಲಿ ಪಂದ್ಯಾವಳಿಗಾಗಿ 18 ವರ್ಷದ ಭಾರತೀಯ ಪ್ರತಿಭೆಗೆ ಅಭಿನಂದನೆಗಳು” ಎಂದು ಟ್ವೀಟ್ ಮಾಡಿದೆ.
https://twitter.com/ANI/status/1694677284526137582