BIG NEWS:‌ ʼವರ್ಕ್ ಫ್ರಂ ಕಚೇರಿʼ ಒಪ್ಪಿಕೊಳ್ತಿಲ್ಲ ಉದ್ಯೋಗಿಗಳು..… ಬಡ್ತಿ, ಸಂಬಳ ಕಟ್ ಮಾಡುವ ಬೆದರಿಕೆ ನೀಡ್ತಿವೆ ಕಂಪನಿಗಳು..!

ಕೊರೊನಾ, ಲಾಕ್‌ ಡೌನ್‌ ಕೆಲಸದ ವಿಧಾನವನ್ನು ಬದಲಿಸಿತ್ತು. ಕೊರೊನಾ ಸಮಯದಲ್ಲಿ ಮನೆಯಿಂದಲೇ ಕೆಲಸ ಮಾಡುವ ವ್ಯವಸ್ಥೆಯನ್ನು ಬಹುತೇಕ ಕಂಪನಿಗಳು ನೀಡಿದ್ದವು. ಕೊರೊನಾ ಅಬ್ಬರ ಕಡಿಮೆ ಆಗ್ತಿದ್ದಂತೆ ಒಂದೊಂದೇ ಕಂಪನಿಗಳು ಬಾಗಿಲು ತೆರೆಯಲು ಶುರು ಮಾಡಿದ್ವು. ಈಗ್ಲೂ ಅನೇಕ ಕಂಪನಿಗಳಲ್ಲಿ ವರ್ಕ್‌ ಫ್ರಂ ಹೋಮ್‌ ಸೌಲಭ್ಯ ಇದ್ದು, ಅದನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಕಂಪನಿಗಳು ಹೆಜ್ಜೆ ಇಡುತ್ತಿವೆ. ದೊಡ್ಡ ಟೆಕ್ ಕಂಪನಿಗಳಾದ ಟಿಸಿಎಸ್‌, ಇನ್ಫೋಸಿಸ್‌, ಎಚ್‌ ಸಿಎಲ್‌ ಟೆಕ್ನಾಲಜೀಸ್, ಗೂಗಲ್ ಮತ್ತು ಅಮೆಜಾನ್ ನಂತಹ ಕಂಪನಿಗಳು ಉದ್ಯೋಗಿಗಳನ್ನು ಕಚೇರಿಗೆ ಕರೆಯುತ್ತಿವೆ.

ಕೊರೊನಾ ಆರಂಭದಲ್ಲಿ ಮನೆಯಿಂದಲೇ ಕೆಲಸ ಮಾಡೋದು ಕಷ್ಟ ಎನ್ನುತ್ತಿದ್ದ ನೌಕರರು ಈಗ ವರ್ಕ್‌ ಫ್ರಂ ಹೋಮ್‌ ಗೆ ಹೊಂದಿಕೊಂಡಿದ್ದಾರೆ. ಕಚೇರಿಗೆ ಬರೋದು ಅವರಿಗೆ ಕಷ್ಟವಾಗ್ತಿದೆ. ಅನೇಕರು ಮತ್ತೆ ಕಚೇರಿಗೆ ಬಂದು ಕೆಲಸ ಮಾಡುವ ಇಚ್ಛೆ ಹೊಂದಿಲ್ಲ ಎಂಬುದು ಕೆಲ ವರದಿಗಳಿಂದ ಬಹಿರಂಗವಾಗಿದೆ. ಆದ್ರೆ ಇಂಥ ಉದ್ಯೋಗಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕಂಪನಿ ನಿರ್ಧರಿಸಿದೆ. ಇದು ಉತ್ತಮ ತಂಡ, ಉದ್ಯೋಗಿಗಳ ಸುಧಾರಣೆ, ನಾವೀನ್ಯತೆ ಮತ್ತು ಕಚೇರಿ ಸಂಸ್ಕೃತಿಯ ಪ್ರಚಾರಕ್ಕೆ ಮಹತ್ವ ನೀಡುತ್ತದೆ ಎಂದು ಕಂಪನಿಗಳು ಹೇಳಿವೆ.

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಎಲ್ಲಾ ಉದ್ಯೋಗಿಗಳಿಗೆ ಮಾರ್ಚ್ 31 ರವರೆಗೆ ಕನಿಷ್ಠ 3 ದಿನಗಳ ಕಾಲ ಕಚೇರಿಯಿಂದ ಕೆಲಸ ಮಾಡಲು ಸೂಚನೆ ನೀಡಿದೆ. ಇದನ್ನು ವಿರೋಧಿಸುವ ಉದ್ಯೋಗಿಗಳ ವಿರುದ್ಧ  ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ಎಚ್‌ಸಿಎಲ್, ಫೆಬ್ರವರಿ 19 ರಿಂದ ಕನಿಷ್ಠ 3 ದಿನಗಳ ಕಾಲ ಕಚೇರಿಯಿಂದ ಕೆಲಸ ಮಾಡುವುದನ್ನು ಕಡ್ಡಾಯಗೊಳಿಸಿದೆ.

ಇನ್ಫೋಸಿಸ್ ತನ್ನ ಉದ್ಯೋಗಿಗಳಿಗೆ ಪ್ರತಿ ತಿಂಗಳು ಕನಿಷ್ಠ 10 ದಿನ ಕಚೇರಿಗೆ ಬರಬೇಕೆಂದು ನಿಯಮ ರೂಪಿಸಿದೆ. ವಾರದಲ್ಲಿ ಮೂರು ದಿನಗಳ ನಿಯಮವನ್ನು ವಿಪ್ರೋ ಕೂಡ ಜಾರಿಗೆ ತಂದಿದೆ. ಗೂಗಲ್ ಉದ್ಯೋಗಿಗಳಿಗೆ ಪ್ರತಿ ದಿನ ಕಚೇರಿಗೆ ಬರುವಂತೆ ಹೇಳಿದೆ. ಇಕಾಮರ್ಸ್ ಕಂಪನಿ ಅಮೆಜಾನ್ ತನ್ನ ಉದ್ಯೋಗಿಗಳಿಗೆ ಕಚೇರಿಗೆ ಹಿಂತಿರುಗದಿದ್ದರೆ ಬಡ್ತಿ ನೀಡುವುದಿಲ್ಲ ಎಂದು ಬೆದರಿಕೆ ಹಾಕಿದೆ. ಇನ್ನು ಟೆಕ್ ಕಂಪನಿ ಐಬಿಎಂ, ಕಚೇರಿಗೆ ಬರದೆ ಹೋಗುವ ಉದ್ಯೋಗಿಗಳು ಕೆಲಸ ಬಿಡಬಹುದು ಎಂದು ಅಮೆರಿಕದ ಉದ್ಯೋಗಿಗಳಿಗೆ ಹೇಳಿದೆ. ಡೆಲ್, ಹೈಬ್ರಿಡ್ ವರ್ಕ್ ಪಾಲಿಸಿಯನ್ನು ಜಾರಿಗೆ ತಂದಿದೆ.  ನೌಕರರು ಪ್ರತಿ ತ್ರೈಮಾಸಿಕದಲ್ಲಿ 39 ದಿನಗಳ ಕಾಲ ಕಚೇರಿಯಿಂದ ಕೆಲಸ ಮಾಡಬೇಕಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read